ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಮಲಗುವ ವೇಳೆ ನಮ್ಮ ಮೆದುಳು ಕೂಡಾ ಆರಾಮ ಮಾಡುತ್ತದೆ. ಹೀಗಾಗಿ ನಿದ್ದೆಯಿಂದ ಎದ್ದ ಬಳಿಕ ಮುಂಜಾನೆ ನಾವು ಫ್ರೆಶ್ ಆಗಿರುತ್ತೇವೆ.
ಮಧ್ಯಾಹ್ನ 10 ರಿಂದ 15 ನಿಮಿಷಗಳವರೆಗೆ ಮಲಗುವುದು ಪ್ರಯೋಜನಕಾರಿಯಾಗಿರುತ್ತದೆ. ಊಟದ ಮುಗಿಸಿ ಒಂದು ಅಥವಾ 2 ಗಂಟೆಯ ಬಳಿಕ ನಿದ್ದೆ ಮಾಡುವುದು ಒಳ್ಳೆಯದು.
ಮಧ್ಯಾಹ್ನ ನಿದ್ದೆ ಮಾಡುವುದರಿಂದ ಊಟ ಕರಗುವುದಿಲ್ಲ. ಇದರಿಂದ ಬ್ಲೋಟಿಂಗ್ ಜೊತೆಗೆ ಬೊಜ್ಜಿನ ಸಮಸ್ಯೆ ಕೂಡಾ ಕಾಡುತ್ತದೆ.
ಹಗಲು ಹೊತ್ತಿನಲ್ಲಿ ಮಾಡುವ ನಿದ್ದೆ ದೇಹಕ್ಕೂ ಒಳ್ಳೆಯದಲ್ಲ.
ಹಗಲು ಹೊತ್ತಿನಲ್ಲಿ ಮಾಡುವ ನಿದ್ದೆ ರಾತ್ರಿಯ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನ್ ನಲ್ಲಿ ಏರುಪೇರಾಗುತ್ತದೆ.
ಹಗಲು ಹೊತ್ತು ನಿದ್ದೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹಗಲು ಹೊತ್ತು ನಿದ್ದೆ ಮಾಡುವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ.
ಹಗಲು ಹೊತ್ತು ನಿದ್ದೆ ಮಾಡುವುದರಿಂದ ಡಯಾಬಿಟೀಸ್ ಅಪಾಯ ಕೂಡಾ ಕಾಡುತ್ತದೆ.