ಸಾಮಾನ್ಯವಾಗಿ ಅಕ್ಕಿ ತೊಳೆದ ಬಳಿಕ ನೀರನ್ನು ವೇಸ್ಟ್ ಎಂದು ಚೆಲ್ಲುತ್ತೇವೆ. ಆದರೆ, ಇದರಲ್ಲಿ ಕೂದಲಿನ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯ ಅಡಗಿದೆ.
ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್ಗಳು, ಮಿನರಲ್ಗಳು ಮತ್ತು ಅಮೈನೋ ಆಮ್ಲದಂತಹ ಅಂಶಗ್ಸ್ಳು ಹೇರಳವಾಗಿದ್ದು ಇದರ ಬಳಕೆಯಿಂದ ಕೂದಲಿನ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು.
ಅಕ್ಕಿ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಮಾಲಿನ್ಯ, ಧೂಳು, ಯುವಿ ಕಿರಣಗಳಿಂದ ಉಂಟಾಗಬಹುದಾದ ಕೂದಲಿನ ಹಾನಿಯನ್ನು ತಡೆಯುತ್ತದೆ.
ಅಕ್ಕಿ ತೊಳೆದ ನೀರಿನಲ್ಲಿ ಹೇರ್ ವಾಶ್ ಮಾಡುವುದರಿಂದ ಇದು ತುರಿಕೆ, ತಲೆಹೊಟ್ಟಿನಂತಹ ಸಮಸ್ಯೆಗಳಿಂದ ಪರಿಹಾರ ನೀಡಿ, ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ.
ಅಕ್ಕಿ ತೊಳೆದ ನೀರಿನಲ್ಲಿ ಹೇರ್ ವಾಶ್ ಮಾಡುವುದರಿಂದ ಕೂದಲು ಒಡೆಯುವಿಕೆ/ ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಅಕ್ಕಿ ತೊಳೆದ ನೀರಿನಲ್ಲಿ ಅಮೈನೋ ಆಮ್ಲ, ಪ್ರೊಟೀನ್ ಹೇರಳವಾಗಿದ್ದು ಇದರ ಬಳಕೆಯಿಂದ ಕೂದಲು ಬುಡದಿಂದಲೂ ಗಟ್ಟಿಮುಟ್ಟಾಗುತ್ತದೆ.
ಅಕ್ಕಿ ತೊಳೆದ ನೀರಿನಿಂದ ತಲೆ ತೊಳೆಯುವುದರಿಂದ ಕೂದಲಿನ ಕಾಂತಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಕೂದಲ ಮೃದುತ್ವವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ ಆಗಿದೆ.
ಅಕ್ಕಿ ನೀರಿನಲ್ಲಿ ಇನೋಸಿಟಾಲ್ ಎಂಬ ಪೋಷಕಾಂಶ ಕಂಡು ಬರುತ್ತದೆ. ಇದು ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ಜೊತೆಗೆ ಕೂದಲ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.