ತಿಂಡಿ ತಿನಿಸು ಕರಿದ ನಂತರ ಎಣ್ಣೆಯನ್ನು ಏನು ಮಾಡುವುದು ಎನ್ನುವುದು ಅಡುಗೆ ಮನೆಯ ಸಾಮಾನ್ಯ ಸಮಸ್ಯೆ.

Ranjitha R K
Feb 03,2023


ಉಳಿದ ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ಮೇಲೆಯೇ ಅದನ್ನು ಸ್ಟೋರ್ ಮಾಡಿ. ಗಡಿಬಿಡಿಯಲ್ಲಿ ಬಿಸಿ ಎಣ್ಣೆಯನ್ನು ಡಬ್ಬಕ್ಕೆ ಹಾಕಿದರೆ ಅದರ ಆವಿಯಿಂದ ಎಣ್ಣೆಯಲ್ಲಿ ನೀರು ಸೇರಿಕೊಳ್ಳುತ್ತದೆ.


ಎಣ್ಣೆಯನ್ನು ಸ್ಟೋರ್ ಮಾಡುವ ಮುನ್ನ ಕಡಿಮೆ ಎಂದರೂ ಮೂರು ಬಾರಿ ಅದನ್ನು ಶೋಧಿಸಿಕೊಳ್ಳಿ. ಹೀಗೆ ಮಾಡಿದಾಗ ಎಣ್ಣೆಯಲ್ಲಿ ಆಹಾರ ಉಳಿದುಕೊಳ್ಳುವ ಸಾಧ್ಯತೆ ಕಡಿಮೆ.


ಎಣ್ಣೆಯನ್ನು ಶೋಧಿಸಲು ಆಯಿಲ್ ಫಿಲ್ಟರ್ ಬಳಸಿ. ಇದರಲ್ಲಿ ಎಣ್ಣೆ ಫಿಲ್ಟರ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಫಿಲ್ಟರ್ ಆದ ನಂತರ ಫ್ರೆಶ್ ಎಣ್ಣೆ ಯಂತೆ ಕಾಣುತ್ತದೆ.


ಎಣ್ಣೆಯನ್ನು ಗಾಳಿಯಾಡದ ಡಬ್ಬದಲ್ಲಿಯೇ ಶೇಖರಿಸಿಕೊಳ್ಳಿ.


ಹೀಗೆ ಸ್ಟೋರ್ ಮಾಡಿದ ಎಣ್ಣೆಯನ್ನು ಆದಷ್ಟು ಬೇಗೆ ಮರು ಬಳಕೆ ಮಾಡಿ. ಇಲ್ಲವಾದರೆ ಅದರಲ್ಲಿ ಒಂದು ರೀತಿಯ ವಾಸನೆ ಬರಲು ಆರಂಭವಾಗುತ್ತದೆ.


ಈ ಎಣ್ಣೆಯನ್ನು ಗಾರ್ಡನಿಂಗ್ ನಲ್ಲಿಯೂ ಬಳಸಬಹುದು. ಯಾವ ಗಿಡದ ಬಳಿ ಬಹಳ ಕೀಟಗಳು ಕಾಣಿಸಿಕೊಳ್ಳುತ್ತವೆಯೋ ಆ ಗಿಡದ ಪಕ್ಕದಲ್ಲಿ ಈ ಎಣ್ಣೆಯನ್ನು ಇರಿಸಿ.


ಉಳಿದ ಅಡುಗೆ ಎಣ್ಣೆಯನ್ನು ಮರು ಬಳಸುವ ಮುನ್ನ ಇಲ್ಲಿ ತಿಳಿಸಿದ ವಿಧಾನಗಳನ್ನು ಖಂಡಿತಾ ಅನುಸರಿಸಿ.

VIEW ALL

Read Next Story