ನವೆಂಬರ್ ತಿಂಗಳು ಶುರುವಾಗುತ್ತಿದ್ದಂತೆ, ಭಾರತೀಯ ಮನೆಗಳಲ್ಲಿ ಈ ತಿಂಗಳುಗಳಲ್ಲಿ ಮದುವೆ ಮುಂಜಿಯಂತಹ ಸಮಾರಂಭಗಳು ಆರಂಭವಗಿದೆ.
ಸುಧಾ ಮೂರ್ತಿ ಅವರು ಸಂತೋಷದ ಜೀವನಕ್ಕಾಗಿ ಐದು ಪ್ರಮುಖ ಸುವರ್ಣ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬರಿಗೊಬ್ಬರು ಒಳ್ಳೆಯ ಸ್ನೇಹಿತರಾಗಿದ್ದರೆ ಮಾತ್ರ ಗಂಡ ಹೆಂಡತಿ ಸಂತೋಷವಾಗಿರಲು ಸಾಧ್ಯ.
ಮದುವೆಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು ಎಂಬ ನಿಯಮವಿದೆ ಹೀಗಿದ್ದರೆ ಮಾತ್ರ ಸಂಸಾರ ಸುಖವಾಗಿರುತ್ತದೆ.
ಜಗಳಗಳು ನಡೆಯುತ್ತಲೇ ಇರುತ್ತವೆ, ಆದರೆ ಇಬ್ಬರೂ ಪರಸ್ಪರ ಆಲೋಚನೆಗಳನ್ನು ಹತ್ತಿಕ್ಕಬಾರದು, ಸಮಸ್ಯೆಯನ್ನು ಕೂತು ಪರಿಹರಿಸಿಕೊಳ್ಳಬೇಕು.
ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದ್ದರಿಂದ ಪರಿಪೂರ್ಣತೆಯನ್ನು ಪ್ರೀತಿಯಲ್ಲಿ ನಿರೀಕ್ಷಿಸುವುದನ್ನು ಬಿಟ್ಟು ಬಿಡಿ.
ಹೆಂಡತಿಗೆ ಅಡುಗೆಯಲ್ಲಿ ಸಹಾಯ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಅನ್ಯೂನ್ಯತೆಯನ್ನು ಹೆಚ್ಚಿಸುತ್ತದೆ.
ಈ ರೀತಿಯಾಗಿ ನಾವು ನಮ್ಮ ವೈವಾಹಿಕ ಜೀವನವನ್ನು ಸಂತೋಷಪಡಿಸಬಹುದು ಎನ್ನುತ್ತಾರೆ ಸುಧಾ ಮೂರ್ತಿಯವರು.