ಬಿರು ಬೇಸಿಗೆಯಿಂದಾಗಿ ನೆತ್ತಿ ಒಣಗಿದ್ಯಾ.... ತಲೆಯಲ್ಲಿ ತುರಿಕೆ ಸಮಸ್ಯೆಯಿಂದ ಹೇರ್ ಫಾಲ್ ಜಾಸ್ತಿ ಆಗಿದ್ಯಾ... ಇವೆಲ್ಲದಕ್ಕೂ ಪರಿಹಾರ ನೀಡಲು ಕೆಲವು ಪಾನೀಯಗಳು ಲಾಭದಾಯಕವಾಗಿವೆ.
ಬೇಸಿಗೆಯಲ್ಲಿ ಮನೆಯಲ್ಲಿಯೇ ಕೆಲವು ಪಾನೀಯಗಳನ್ನು ತಯಾರಿಸಿ ಸವಿಯುವುದರಿಂದ ಕೂದಲು ಬೇರುಗಳಿಂದ ಪೋಷಿಸಲ್ಪಟ್ಟು ಆರೋಗ್ಯಕರವಾಗಿ ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆಗೆ ನೆರವಾಗುತ್ತವೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಈ ಜ್ಯೂಸ್ ಕುಡಿಯುವುದರಿಂದ ಕೂದಲಿನ ಕಿರುಚೀಲಗಳು ಬಲಗೊಳ್ಳುತ್ತವೆ. ಇದು ಹೇರ್ ಫಾಲ್ ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ.
ಬೀಟಾ-ಕ್ಯಾರೊತಿನ್ ಮಾತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಕ್ಯಾರೆಟ್ ಜ್ಯೂಸ್ ನೆತ್ತಿಯಲ್ಲಿ ನೈಸರ್ಗಿಕ ಎಣ್ಣೆ ಉತ್ಪಾದಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿದೆ. ಇದರ ಸೇವನೆಯಿಂದ ಕೂದಲಿಗೆ ಪೋಷಣೆ ದೊರೆತು ಕೂದಲು ಬೇರುಗಳಿಂದ ಗಟ್ಟಿಯಾಗುತ್ತವೆ.
ಪಾಲಕ್ ಮತ್ತು ಸೌತೆಕಾಯಿಯಲ್ಲಿ ಕಬ್ಬಿಣ, ಪೋಲೆಟ್ ನಿಂದ ತುಂಬಿರುವ ಪಾಲಕ್ ಸೋಪ್ಪ್ ಮತ್ತು ಸೌತೆಕಾಯಿ ನೆತ್ತಿಯನ್ನು ತಂಪಾಗಿಸುವುದರ ಜೊತೆಗೆ ಕೂದಲ ಬೆಳವಣಿಗೆಯನ್ನು ಸಹ ಪ್ರೋತ್ಸಾಹಿಸುತ್ತದೆ.
ಕಬ್ಬಿಣ, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬೀಟ್ರೂಟ್ ಜ್ಯೂಸ್ ನೆಟ್ಟಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಜೊತೆಗೆ ಉತ್ತಮ ಪ್ರಮಾಣದಲ್ಲಿ ಆಕ್ಸಿಜನ್ ದೊರೆಯುವಂತೆ ಮಾಡುವ ಮೂಲಕ ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.