ಕಾಲು ತುಂಬಾ ನೋವಾಗುತ್ತಿದ್ದರೆ ಅಥವಾ ಊತ ನೋವಿದ್ದರೆ ವೈದರ ಬಳಿ ತೋರಿಸಿ, ಇಲ್ಲವಾದರೆ ಬೆಳ್ಳುಳ್ಳಿಯನ್ನು ಪಾದಕ್ಕೆ ಉಜ್ಜಿರಿ ಇದರಿಂದ ಬೇಗ ನೋವು ಕಡಿಮೆಯಾಗುತ್ತದೆ.
ಸಾಮಾನ್ಯವಾಗಿ ನಾವು ಬೆಳ್ಳುಳ್ಳಿಯನ್ನು ಆಹಾರದ ಭಾಗವಾಗಿ ಉಪಯೋಗಿಸುತ್ತೇವೆ ಅದು ಆಹಾರದಲ್ಲಿ ಹೀಗೆ ಲಾಭವನ್ನು ಉಂಟು ಮಾಡುತ್ತದೋ ಹಾಗೆಯೇ ಆರೋಗ್ಯದ ಸಮಸ್ಯೆಯಲ್ಲೂ ಅಷ್ಟೇ ಪಾತ್ರವಹಿಸುತ್ತದೆ ಮತ್ತು . ಪಾದಗಳಿಗೆ ಹಚ್ಚುವುದರಿಂದಲೂ ಅಷ್ಟೇ ಲಾಭವಿದೆ.
ಬೆಳ್ಳುಳ್ಳಿ ವಾಸ್ತವವಾಗಿ ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ ಅದರ ಜೊತೆಗೆ ಇದು ಉರಿಯೂತ, ನೋವನ್ನು ಕಡಿಮೆ ಮಾಡುತ್ತದೆ
ಬೆಳ್ಳುಳ್ಳಿಯನ್ನು ಪಾದಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ
ಜ್ವರ ಬಂದರೆ ತಕ್ಷಣ ಬೆಳ್ಳುಳ್ಳಿಯನ್ನು ಅಗಿದು ನಿಮ್ಮ ಪಾದಗಳ ಮೇಲೆ ಉಜ್ಜಬೇಕು ಇದರಿಂದ ಜ್ವರ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯನ್ನು ಪಾದದ ಅಡಿಭಾಗಕ್ಕೆ ಉಜ್ಜುವುದರಿಂದ ದೇಹದಲ್ಲಿ ಶಾಖ ಉಂಟಾಗುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.
ರಾತ್ರಿ ಮಲಗುವ ಮೊದಲು 5 ರಿಂದ 10 ನಿಮಿಷಗಳ ಕಾಲ ಬೆಳ್ಳುಳ್ಳಿಯಿಂದ ನಿಮ್ಮ ಪಾದಕ್ಕೆ ಮಸಾಜ್ ಮಾಡುವುದರಿಂದ ಮತ್ತು ನಿತ್ಯವೂ ಹೀಗೆ ಮಾಡಿದರೆ ಸುಲಭವಾಗಿ ಕಾಯಿಲೆ ಬರುವುದಿಲ್ಲ ಮತ್ತು ಇದು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.