ಕೂದಲಿಗೆ ಶಾಂಪೂ ಬಳಸುವಾಗ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ
ಹೇರ್ ಶಾಂಪೂ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಇದು ಕೂದಲಿನ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಕೂದಲಿಗೆ ಶಾಂಪೂ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ಗಮನವಹಿಸಬೇಕು. ಅವುಗಳೆಂದರೆ...
ಕೂದಲು ಒದ್ದೆಯಾಗದೆ ಶಾಂಪೂ ಅನ್ವಯಿಸುವುದರಿಂದ ಕೂದಲು ಒರಟಾಗಬಹುದು. ಇದನ್ನು ತಪ್ಪಿಸಲು ಕೂದಲಿಗೆ ಶಾಂಪೂ ಅನ್ವಯಿಸುವ ಮೊದಲು ಕೂದಲನ್ನು ಒದ್ದೆ ಮಾಡುವುದನ್ನು ಮರೆಯಬೇಡಿ.
ನಿಮ್ಮ ಕೂದಲಿಗೆ ಸರಿಹೊಂದುವ ಶಾಂಪೂವನ್ನು ಆಯ್ಕೆ ಮಾಡಿ. ಇಲ್ಲದಿದ್ದರೆ ಇದು ಕೂದಲಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಶಾಂಪೂ ಮಾಡುವಾಗ ತುಂಬಾ ಬಿಸಿ ನೀರನ್ನು ಬಳಸುವುದರಿಂದ ತಲೆಹೊಟ್ಟು ಹೆಚ್ಚಾಬಹುದು. ಹಾಗಾಗಿ, ಹೇರ್ ವಾಶ್ ಮಾಡುವಾಗ ಬಿಸಿ ನೀರಿನ ಬಳಕೆಯನ್ನು ತಪ್ಪಿಸಿ.
ಶಾಂಪೂ ಅಪ್ಪ್ಲೈ ಮಾಡುವಾಗ ಮೊದಲು ಅದನ್ನು ಬೇರೆ ಬಟ್ಟಲಿನಲ್ಲಿ ಸ್ವಲ್ಪ ನೀರಿನೊಂದಿಗೆ ಬೆರೆಸಿ ಹಚ್ಚಿ. ಇಲ್ಲದಿದ್ದರೆ, ಕೂದಲು ಹೆಚ್ಚು ಒರಟಾಗುತ್ತದೆ.
ಕೂದಲಿಗೆ ಶಾಂಪೂ ಬಳಸಿದ ನಂತರ ಕಂಡೀಷನರ್ ಬಳಸುವುದನ್ನು ಮರೆಯಬೇಡಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.