ಕನಸಿನಲ್ಲಿ ಉರಿಯುತ್ತಿರುವ ದೀಪ ಕಾಣಿಸುವುದು ವ್ಯಕ್ತಿಗೆ ಶುಭ ಸಂಕೇತವಿದ್ದಂತೆ. ಮುಂಬರುವ ದಿನಗಳಲ್ಲಿ ವ್ಯಕ್ತಿಗೆ ಅಪಾರ ಧನಲಾಭವಾಗುತ್ತವೆ ಎಂಬುದರ ಸೂಚಕ.
ಮಲಗಿರುವ ವ್ಯಕ್ತಿಗೆ ಕನಸಿನಲ್ಲಿ ಕಿವಿಯೋಲೆಗಳು ಕಂಡರೆ, ಮುಂಬರುವ ದಿನಗಳಲ್ಲಿ ಆ ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ ಎಂಬುದರ ಸಂಕೇತ ಅದು.
ಕನಸಿನಲ್ಲೇ ಆಗಲಿ ಆಥವಾ ನಿಜಜೀವನದಲ್ಲಿಯೇ ಆಗಲಿ ಚಿನ್ನ ಪಡೆಯುವುದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಆದರೆ, ಹಲವು ಬಾರಿ ಕನಸಿನಲ್ಲಿ ಇವುಗಳ ಅರ್ಥ ತುಂಬಾ ಬದಲಾಗುತ್ತದೆ. ಕನಸಿನಲ್ಲಿ ಒಂದು ವೇಳೆ ನಿಮಗೂ ಕೂಡ ಚಿನ್ನ ಗೋಚರಿಸಿದರೆ, ಅದು ಶುಭ ಸಂಕೇತವಾಗಿದೆ.
ನೀವು ನಿಮ್ಮ ಕನಸಿನಲ್ಲಿ ಉಂಗುರವನ್ನು ಧರಿಸುತ್ತಿರುವುದನ್ನು ನೋಡಿದರೂ ಕೂಡ ಅದು ಶುಭ ಸಂಕೇತವಾಗಿದೆ. ಕನಸಿನಲ್ಲಿ ಉಂಗುರ ಕಾಣುವುದು, ನಿಜ ನೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನದ ಮುನ್ಸೂಚನೆಯಾಗಿದೆ.
ಹಾವೂ ಒಂದು ಅಪಾಯಕಾರಿ ಜಂತು. ಆದರೆ, ಕನಸಿನಲ್ಲಿ ಒಂದು ವೇಳೆ ನಿಮಗೆ ಹಾವು ಕಂಡರೆ ಹೆದರಬೇಡಿ. ಕನಸಿನಲ್ಲಿ ಬಿಲದ ಬಳಿ ಹಾವು ಕಂಡರೆ, ಅದು ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಧನಾಗಮನದ ಸಂಕೇತವಾಗಿದೆ.
ಕನಸಿನಲ್ಲಿ ಗುಲಾಬಿ ಹೂವು ನೋಡುವುದು ಅಥವಾ ಕಮಲದ ಹೂವು ನೋಡುವುದು, ಭವಿಷ್ಯದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರಲಿದೆ ಎಂಬುದು ಸಂಕೇತ ಅದು.