ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ, ಇದನ್ನು ಫಿಲ್ಟರ್ ಮಾಡಲು ಲಿವರ್ ಹೆಚ್ಚು ಶ್ರಮಿಸಬೇಕಾಗುತ್ತದೆ. ಹೆಚ್ಚಾಗಿ ಇದನ್ನು ಸೇವಿಸುವುದರಿಂದ ಲಿವರ್ ಸಮಸ್ಯೆಗಳು ಹೆಚ್ಚಾಗುತ್ತದೆ.
ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಭವಿಷ್ಯದಲ್ಲಿ ನೀವು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ತುತ್ತಾಗಬಹುದು.
ಫ್ರೆಂಚ್ ಫ್ರೈಸ್ಗಳನ್ನು ಸೇವಿಸುವುದರಿಂದ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಮತ್ತು ಉರಿಯೂತ ಉಂಟಾಗುತ್ತದೆ. ಮುಂದೆ ಇದರಿಂದ ಹೆಚ್ಚು ಸಮಸ್ಯೆ ಒಂಟಾಗಬಹುದು.
ಪೆಪ್ಪೆರೋನಿಯಂತಹ ಸಂಸ್ಕರಿಸಿದ ಮಾಂಸಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಇಂತಹ ಕೊಬ್ಬುಗಳು ವಿವರ್‌ಗೆ ಭಾರಿ ಅಪಾಯ.
ಚೀಸ್ ಬರ್ಗರ್ಸ್ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ನಿಮ್ಮ ಲಿವರ್ ಅಷ್ಟೇ ಅಲ್ಲದೆ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.