ಈ ಆಹಾರಗಳಲ್ಲಿ ಕ್ಯಾನ್ಸರ್‌ ತಡೆಯುವ ಶಕ್ತಿ ಇದೆ.

ಸೇಬು

ಸೇಬುಗಳು ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿವೆ. ಅವು ಕ್ಯಾನ್ಸರ್ ವಿರೋಧಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುತ್ತವೆ.

ಕ್ಯಾರೆಟ್‌

ಕ್ಯಾರೆಟ್‌ನಲ್ಲಿ ವಿಟಮಿನ್ ಕೆ, ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, ಇದು ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುತ್ತದೆ. ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗಡ್ಡೆ ತರಕಾರಿಗಳು

ಎಲೆಕೋಸು, ಹೂಕೋಸು, ಕೋಸುಗಡ್ಡೆ ಮತ್ತು ಕೇಲ್‌ನಂತಹ ಗಡ್ಡೆ ತರಕಾರಿಗಳು ವಿಟಮಿನ್ ಸಿ, ವಿಟಮಿನ್ ಕೆಯಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ಕ್ಯಾನ್ಸ‌ರ್ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.

ಬೆರ್ರಿ ಹಣ್ಣುಗಳು

ಸ್ಟ್ರಾಬೆರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರಿಗಳಂತಹ ಬೆರ್ರಿಗಳು ವಿಟಮಿನ್‌, ಖನಿಜ, ಆಹಾರದ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ.ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.

ದ್ರಾಕ್ಷಿ

ದ್ರಾಕ್ಷಿಯಲ್ಲಿ ರೆಸ್ಟೆರಾಟ್ರೊಲ್ ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಿದೆ. ವಿಶೇಷವಾಗಿ ಕೆಂಪು ದ್ರಾಕ್ಷಿಯ ಚರ್ಮದಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಇನ್ನೂ ಇದು ಕ್ಯಾನ್ಸರ್ ತಡೆಯುವಲ್ಲಿ ಸಹಾಯ ಮಾಡುತ್ತದೆ.

ವಾಲ್‌ನಟ್ಸ್‌

ವಾಲ್‌ನಟ್ಸ್‌ನಲ್ಲಿ ಪೆಡುನ್‌ಕುಲಾಜಿನ್ ಎಂಬ ಸಂಯುಕ್ತವಿದೆ. ಇದು ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರು ತಮ್ಮ ನಿತ್ಯದ ಆಹಾರದಲ್ಲಿ ವಾಲ್‌ನಟ್‌ಗಳನ್ನು ಸೇರಿಸುವುದು ತುಂಬಾ ಒಳ್ಳೆಯದು.

ಡಾರ್ಕ್‌ ಚಾಕೊಲೇಟ್

ಡಾರ್ಕ್ ಚಾಕೊಲೇಟ್‌ಗಳು ಪಾಲಿಫಿನಾಲ್‌ಗಳು, ಪ್ಲೇವನಾಯ್‌ಗಳನ್ನು ಹೊಂದಿರುತ್ತವೆ. ಅವು ದೇಹದಲ್ಲಿ ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.

VIEW ALL

Read Next Story