ಕೂದಲು ಉದುರುವಿಕೆಗೆ ನಿಮ್ಮ ಈ ಅಭ್ಯಾಸಗಳೇ ಪ್ರಮುಖ ಕಾರಣ
ಅಧ್ಯಯನದ ಪ್ರಕಾರ, ನಿತ್ಯ 50-100 ಕೂದಲು ಉದುರುವುದು ಸರ್ವೇ ಸಾಮಾನ್ಯ. ಆದರೆ, ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಅಥವಾ ಚಯಾಪಚಯ ಅಸ್ವಸ್ಥತೆ ಕಾರಣಗಳಿಂದಲೂ ಕೂದಲು ಉದರಬಹುದು. ಇದಲ್ಲದೆ, ನಿಮ್ಮ ಕೆಲವು ಅಭ್ಯಾಸಗಳು ಕೂಡ ಕೂದಲು ಉದುರುವಿಕೆಗೆ ಕಾರಣವಾಗಿರಬಹುದು. ಅಂತಹ ಅಭ್ಯಾಸಗಳೆಂದರೆ...
ಕೆಲವರಿಗೆ ಕೂದಲು ಸ್ವಲ್ಪ ಸಡಿಲವಾಗಿದ್ದರೂ ಅವರು ಸಮಾಧಾನದಿಂದ ಇರುವುದಿಲ್ಲ. ಇದಕ್ಕಾಗಿಯೇ ಕೂದಲನ್ನು ಬಿಗಿಯಾಗಿ ಕಟ್ಟುತ್ತಾರೆ. ಆದರಿದು ಕೂದಲುದುರುವಿಕೆ ಸಮಸ್ಯೆಗೂ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ ಕೂದಲನ್ನು ನೇರ ಮಾಡಲು, ಬೇಕೆಂದಾಗ ಗುಂಗುರು ಕೂದಲನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ, ರಕ್ಷಣೆಯಿಲ್ಲದೆ ನಿಮ್ಮ ಕೂದಲನ್ನು ಬಿಸಿಮಾಡುವುದರಿಂದ ಕೂದಲಿನ ಹೊರಪದರವನ್ನು ಹಾನಿಗೊಳಿಸುತ್ತದೆ.
ಬದಲಾದ ಜೀವನ ಶೈಲಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದೇ ಅಪರೂಪ. ಅದರ ಜೊತೆಗೆ ನೇರವಾಗಿ ಶಾಂಪೂವನ್ನು ನೆತ್ತಿಗೆ ಹಚ್ಚುವುದರಿಂದ ಇದು ಕೂದಲನ್ನು ನಿರ್ಜಲೀಕರಣಗೊಳಿಸುತ್ತದೆ. ಜೊತೆಗೆ ಕೂದಲು ಉದುರಲು ಕೂಡ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ ಯೋ-ಯೋ ಡಯಟಿಂಗ್ ಗೀಳು ಹೆಚ್ಚಾಗಿದೆ. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ ಆದರೂ, ಪೌಷ್ಟಿಕಾಂಶದ ಕೊರತೆಯಿಂದಾಗಿ ಇದು ಕೂದಲುದುರುವಿಕೆ ಸಮಸ್ಯೆಯನ್ನೂ ಸೃಷ್ಟಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕೂದಲು ಅಲುಗಾಡದಂತೆ ಹೊಂದಿಸಲು ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿವೆ. ಆದರೆ, ಇವುಗಳ ಬಳಕೆಯಿಂದ ಇದು ನಿಮ್ಮ ಕೂದಲನ್ನು ಒಣಗಿಸಿ ಮತ್ತು ದುರ್ಬಲವಾಗಿಸಬಹುದು. ಭವಿಷ್ಯದಲ್ಲಿ ಇದು ಕೂದಲುದುರುವಿಕೆಗೂ ದಾರಿಮಾಡಿಕೊಡಬಹುದು.
ಈ ಬದಲಾದ ಜೀವನ ಶೈಲಿಯಲ್ಲಿ ಒತ್ತಡವು ಕೂಡ ಕೂದಲುದುರುವಿಕೆಗೆ ಕಾರಣವಾಗಿರಬಹುದು. ಇದನ್ನು ತಪ್ಪಿಸಲು ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.