ಸ್ಟ್ರಾಂಗ್ ಆದ ನೀಳವಾದ ಕೂದಲನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ, ನಮಗೆ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳಿಂದ, ಕೆಲವು ಅಭ್ಯಾಸಗಳಿಂದ ಕೂದಲು ಹಾನಿಗೊಳಗಾಗಬಹುದು ಎಂದು ನಿಮಗೆ ತಿಳಿದೆದೆಯೇ? ನಿಮಗೂ ಈ ಅಭ್ಯಾಸಗಳಿದ್ದರೆ ಇಂದೇ ಬದಲಿಸಿಕೊಳ್ಳಿ.
ಕೂದಲಿನಲ್ಲಿ ಕೊಳಕು ಸಂಗ್ರಹವಾಗುವುದರಿಂದ ಇದು ಕೂದಲಿನ ಕಿರುಚೀಲಗಳು ಮೇದೋಗ್ರಂಥಿಗಳ ಸ್ರಾವವನ್ನು ಹೊರಹಾಕುವುದನ್ನು ತಡೆಯುತ್ತದೆ. ಇದು ಕೂದಲಿನ ಬೆಳವಣಿಗೆ ಮೇಲೆ ನೇರ ಪರಿಣಾಮ ಬೀರುತ್ತದೆ.
ಕೆಲವರು ತಲೆಗೆ ಸ್ನಾನ ಮಾಡಲು ತುಂಬಾ ಬಿಸಿ ಬಿಸಿಯಾದ ನೀರನ್ನು ಬಳಸುತ್ತಾರೆ. ಇದರಿಂದ ನೆತ್ತಿಯು ಶುಷ್ಕ, ಮಂದ ಮತ್ತು ಬೇರುಗಳಿಂದ ದುರ್ಬಲವಾಗುತ್ತದೆ.
ಇಂದಿನ ಫಾಸ್ಟ್ ಜೀವನ ಶೈಲಿಯಲ್ಲಿ ಜನರಿಗೆ ಕೂದಲು ಒಣಗಿಸುವಷ್ಟು ಸಮಯ, ಸಂಯಮ ಎರಡೂ ಇಲ್ಲದಂತಾಗಿದೆ. ಇದರಿಂದಾಗಿ ಕೂದಲು ಒನಗಿಸಲು ಹೇರ್ ಡ್ರೈಯರ್, ಹೀಟ್ ಸ್ಟೈಲಿಂಗ್ ಗಳ ಅತಿಯಾದ ಬಳಕೆಯೂ ನಿಮ್ಮ ಕೂದಲಿಗೆ ಹಾನಿ ಉಂಟು ಮಾಡುತ್ತದೆ.
ಕೆಲವರು ತುಂಬಾ ಸುಲಭ ಎಂದು ಸದಾ ಪೋನಿಟೇಲ್ ಹಾಕುತ್ತಾರೆ. ಆದರೆ, ದೀರ್ಘಸಮಯದವರೆಗೆ ಕೂದಲಿಗೆ ಪೋನಿಟೇಲ್ ಹಾಕುವುದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಕೂದಲ ಆರೈಕೆಯ ಭಾಗವಾಗಿ ಕೂದಲಿಗೆ ಕಂಡೀಷನರ್ ಹಚ್ಚುವುದು ಒಳ್ಳೆಯ ಅಭ್ಯಾಸವೇ. ಆದರೆ, ಕೂದಲಿನ ಬುಡದಿಂದ ಕಂಡೀಷನರ್ ಹಚ್ಚುವುದರಿಂದ ಕೂದಲು ಬಲಹೀನಗೊಳ್ಳುತ್ತದೆ.
ಒದ್ದೆ ಕೂದಲನ್ನು ಬಾಚುವುದರಿಂದ ಸಿಕ್ಕನ್ನು ಸುಲಭವಾಗಿ ಬಿಡಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ, ಒದ್ದೆ ಕೂದಲನ್ನು ಬಾಚಿಕೊಳ್ಳುವುದರಿಂದ ಕೂದಲು ದುರ್ಬಲವಾಗುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.