ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತವೆ ಇವು ! ಒಮ್ಮೆ ಹಚ್ಚಿ ನೋಡಿ

Ranjitha R K
Jul 28,2023

ಪೇರಳೆ ಎಲೆ

15 ರಿಂದ 20 ಪೇರಳೆ ಎಲೆಗಳನ್ನು ಒಣಗಿಸಿ. ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಕೂದಲಿಗೆ ಈ ಪೇಸ್ಟ್ ಅನ್ನು ಹಚ್ಚಿ, ಕೆಲವು ನಿಮಿಷಗಳ ಕಾಲ ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿ.

ಹುಣಸೆ ಎಲೆಗಳ ಹೇರ್ ಪ್ಯಾಕ್

ಹುಣಸೆ ಎಲೆಗಳ ಹೇರ್ ಪ್ಯಾಕ್ ಮಾಡಲು, ಎಲೆಗಳನ್ನು ತೆಗೆದುಕೊಂಡು ಮೊಸರಿನ ಜೊತೆ ಚೆನ್ನಾಗಿ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು , ಕೂದಲಿಗೆ ಹಚ್ಚಿ ಮಸಾಜ್ ಮಾಡಿ . ಅದು ಒಣಗಿದ ನಂತರ, ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ.

ಹುಣಸೆ ಎಲೆ ನೀರು

ನೀವು ಹೇರ್ ಪ್ಯಾಕ್ ಬದಲಿಗೆ ಹುಣಸೆ ಎಲೆಗಳನ್ನು ನೀರಿನಲ್ಲಿ ಬೇಯಿಸಿಕೊಂಡು ಅದರ ನೀರನ್ನು ಕೂಡಾ ಕೂದಲಿಗೆ ಹಚ್ಚಬಹುದು. ಅದು ತುಂಬಾ ಸುಲಭ ವಿಧಾನ .

ಕಪ್ ಕರಿಬೇವಿನ ಪೇಸ್ಟ್

ಒಂದು ಬೌಲ್ ತೆಗೆದುಕೊಂಡು 1/4 ಕಪ್ ಕರಿಬೇವಿನ ಎಲೆಗಳು ಮತ್ತು 1/2 ಕಪ್ ಮೊಸರು ಹಾಕಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೂದಳಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಕರಿಬೇವಿನ ಎಲೆ

15-20 ಕರಿಬೇವಿನ ಎಲೆಗಳನ್ನು 2 ಕಪ್ ನೀರಿನಲ್ಲಿ ಹಾಕಿ ನೀರು ಅರ್ಧಕ್ಕೆ ಇಳಿಯುವವರೆಗೆ ಕುದಿಸಿ. ಹೀಗೆ ಕುದಿಸಿದ ನೀರು ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ.

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ ತಣ್ಣಗಾದ ಬಳಿಕ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಬಿಳಿ ಕೂದಲಿನ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಕಪ್ಪು ಎಳ್ಳು

ಕಪ್ಪು ಎಳ್ಳು, ಕೂದಲನ್ನು ಕಪ್ಪಾಗಿಸುತ್ತದೆ. ಆದ್ದರಿಂದ, ಅದರ ಪೇಸ್ಟ್ ಅನ್ನು ಬಿಳಿ ಕೂದಲಿಗೆ ಹಚ್ಚಬಹುದು. ವಾರಕ್ಕೆ ಎರಡು ಬಾರಿ ತಿನ್ನುವುದು ಕೂಡಾ ಕೂದಲು ಬೆಳ್ಳಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಡಾರ್ಕ್ ಕಾಫಿ

ಡಾರ್ಕ್ ಕಾಫಿ ಪೇಸ್ಟ್ ಅನ್ನು ತಯಾರಿಸಿ ಕೂದಲಿಗೆ ಹಚ್ಚಿ. ಪೇಸ್ಟ್ ಸಂಪೂರ್ಣ ಒಣಗಿದ ನಂತರ ಕೂದಲು ತೊಳೆಯಿರಿ.

VIEW ALL

Read Next Story