ಹಿಂದೂ ಧರ್ಮದಲ್ಲಿ ಅರಿಶಿಣಕ್ಕೆ ಪವಿತ್ರ ಸ್ಥಾನ ಮಾನ ಪ್ರಾಪ್ತಿ ಇದೆ. ಅರಿಶಿಣವಿಲ್ಲದೆ ಯಾವುದೇ ಪೂಜೆ ಅಪೂರ್ಣ ಎನ್ನಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನದ ಕೆಲ ಸಣ್ಣ ಉಪಾಯಗಳು ಜೀವನವನ್ನೇ ಬದಲಾಯಿಸುತ್ತವೆ
ಮನೆಯ ಮುಖ್ಯದ್ವಾರದ ಮೇಲೆ ಅರಿಶಿಣದಿಂದ ಒಂದು ರೇಖೆಯನ್ನು ಬರೆಯಿರಿ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಗುರುವಾರದ ದಿನ ಸ್ನಾನ ಮಾಡುವಾಗ ನೀರಿನಲ್ಲಿ ಒಂದು ಚಿಟಿಕೆ ಅರಿಶಿಣ ಬೆರೆಸಿ. ಈ ರೀತಿ ಮಾಡುವುದರಿಂದ ಆದಾಯ ಹೆಚ್ಚಾಗುತ್ತದೆ.
ಪೂಜೆಯ ವೇಳೆ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಅರಿಶಿಣದ ಬೊಟ್ಟು ಇಟ್ಟುಕೊಳ್ಳುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುತ್ತದೆ. ತಾಯಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಅರಿಶಿನದ ಒಂದು ಬೇರನ್ನು ತೆಗೆದುಕೊಂಡು ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಿ ಅದನ್ನು ತಿಜೋರಿಯಲ್ಲಿರಿಸಬೇಕು ಮತ್ತು ನಿತ್ಯ ಅದಕ್ಕೆ ಧೂಪ ಬೆಳಗಬೇಕು.
ಕೆಲ ಅಕ್ಕಿಯ ಕಾಳುಗಳಿಗೆ ಅರಿಶಿಣ ಹಚ್ಚಿ, ಒಂದು ವಸ್ತ್ರದಲ್ಲಿ ಕಟ್ಟಿ ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ ನಿಮಗೆ ಸೇರಬೇಕಾದ ಹಣ ನಿಮ್ಮ ಬಳಿ ಬರಲಾರಂಭಿಸುತ್ತದೆ. ಅರಿಶಿನದ ಒಂದು ಗಂಟನ್ನು ತಯಾರಿಸಿ ಅದನ್ನು ಶ್ರೀಗಣೇಶನಿಗೆ ಅರ್ಪಿಸಿ. ಈ ಕೆಲಸ ಮಾಡುವುದರಿಂದ ಹಲವು ಅಡೆತಡೆಗಳು ದೂರಾಗುತ್ತವೆ.
ಮನೆಯಿಂದ ಹೊರಹೋಗುವ ಮುನ್ನ ಶ್ರೀ ಗಣೇಶನಿಗೆ ಅರಿಶಿಣ ತಿಲಕವನ್ನಿಡಿ ಮತ್ತು ನಂತರ ಅದನ್ನು ನಿಮ್ಮ ಹಣೆಗೆ ಒತ್ತಿಕೊಳ್ಳಿ. ಇದರಿಂದ ಬಡ್ತಿ ಪ್ರಾಪ್ತಿಯಾಗುತ್ತದೆ. ರಾತ್ರಿ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಅರಿಶಿಣದ ಒಂದು ಗಂಟನ್ನು ತಯಾರಿಸಿ ಅದನ್ನು ನಿಮ್ಮ ದಿಂಬಿನ ಬಳಿ ಇರಿಸಿ.