ಅಣಬೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಅವು ಫೈಬರ್ ಅನ್ನು ಕೂಡ ಹೊಂದಿದ್ದು ನಾನ್ ವೆಜ್ ಗಿಂತಲೂ ಒಳ್ಳೆ ಆಯ್ಕೆಯಾಗಿದೆ.
ತಾಳೆ ಹಣ್ಣುಗಳಲ್ಲಿ ಫೈಬರ್ ಜೊತೆಗೆ ಪ್ರೋಟೀನ್ ಕೂಡ ಅಧಿಕ ಪ್ರಮಾಣದಲ್ಲಿದೆ. ಇದು ಬಹುತೇಕ ಮಾಂಸದಂತೆಯೇ ಇರುತ್ತದೆ. ಹಾಗಾಗಿ ನಾನ್ ವೆಜ್ ಮಾಡುವವರು ಇದನ್ನು ಟ್ರೈ ಮಾಡಬಹುದು.
ಪನ್ನೀರ್‌ನಂತೆ ಕಾಣುವ ತೋಫು ಸೋಯಾದಿಂದ ತಯಾರಿಸಿದ ಪ್ರೋಟೀನ್ ಭರಿತ ಆಹಾರವಾಗಿದೆ. ಇದು ಹೆಚ್ಚು ಶಕ್ತಿಯನ್ನು ನೀಡುತ್ತದೆ.
ಸಸ್ಯ ಮೂಲದ ಮಾಂಸ ಈಗ ಎಲ್ಲೆಡೆಯೂ ಲಭ್ಯವಿದೆ. ಇದು ಮಾಂಸದಂತೆ ಕಾಣುವುದಷ್ಟೆ ಅಲ್ಲದೆ ರುಚಿ ಮತ್ತು ಪೋಷಕಾಂಶಗಳಲಿಂದಲೂ ಕೂಡಿದೆ.
ಬೇಳೆಕಾಳುಗಳು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.
ಜಿಮ್‌ಗೆ ಹೋಗುವವರು ತಿನ್ನಲೇಬೇಕಾದ ಆಹಾರ ಇದಾಗಿದೆ. ನಾನ್ ವೆಜ್ ತಿನ್ನದವರಿಗೆ ಇದು ಬೆಸ್ಟ್ ಆಪ್ಟನ್. ಅವರೆಕಾಳು ನಾನ್ವೆಜ್‌ನಲ್ಲಿ ಇರುವ ಪೋಷಕಾಂಶಗಳಿಗಿಂತ ಏನು ಕಡಿಮೆ ಇಲ್ಲ.
ಕಪ್ಪು ಬೀನ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ತ್ವರಿತ ಶಕ್ತಿಯನ್ನು ನೀಡುತ್ತದೆ.