2. ಪದೇ ಪದೇ ಮನೆಯ ಯಾವುದೇ ಸದಸ್ಯ ಅನಾರೋಗ್ಯಕ್ಕೆ ಒಳಗಾಗುವುದು, ಯಾವುದೇ ಮಾತುಗಳಿಲ್ಲದೆ ಮತಭೇದ ಉಂಟಾಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ, ಇದು ನಕಾರಾತ್ಮಕತೆಯ ಸೂಚಕವಾಗಿದೆ.
3. ನಿಮಗೆ ಮನೆಯಲ್ಲಿ ಯಾವಾಗಲೂ ದಣಿದ ಅನುಭವ, ಪ್ರೇರಣಾಹೀನ ಮತ್ತು ಗೊಂದಲಕ್ಕೊಳಗಾದ ಅನುಭವ ಉಂಟಾಗುತ್ತಿದ್ದರೆ, ಅದು ಮನೆಯಲ್ಲಿ ಹೆಚ್ಚುತ್ತಿರುವ ನಕಾರಾತ್ಮಕತೆಯ ಸಂಕೇತವಾಗಿದೆ..
4. ದೇವರ ನಾಮವನ್ನು ನಿಯಮಿತವಾಗಿ ಜಪಿಸುವ ಮನೆಗಳಲ್ಲಿ, ದೀಪಗಳನ್ನು ಬೆಳಗುವ ಮನೆಯಲ್ಲಿ, ಮಂತ್ರಗಳನ್ನು ಜಪಿಸುವ ಮನೆಗಳಲ್ಲಿ ನಕಾರಾತ್ಮಕತೆ ಎಂದಿಗೂ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಭಗವಂತ ನೆಲೆಸಿರುವ ಮನೆಯಲ್ಲಿ ಋಣಾತ್ಮಕತೆ ಸುಳಿಯುವುದಿಲ್ಲ.
5. ಮನೆಯ ಯಾವುದೇ ಮೂಲೆಯಲ್ಲಿಯೂ ಕೂಡ ಕತ್ತಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಕೆಲಸದ ಸ್ಥಳ ಮತ್ತು ಕಚೇರಿ ಇತ್ಯಾದಿಗಳಲ್ಲಿ ದೀಪಗಳನ್ನು ಬೆಳಗಿಸಿ. ಈ ಜಾಗಗಳಲ್ಲಿ ದೀರ್ಘಕಾಲ ಕತ್ತಲೆಯಾಗಿ ಉಳಿಯುವುದು ನಕಾರಾತ್ಮಕತೆಗೆ ಕಾರಣವಾಗುತ್ತದೆ.
6. ಯಾವಾಗಲು ಮೃತಪಟ್ಟವರ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆದ್ದರಿಂದ ಮನೆ ಮತ್ತು ನಿಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಿ ಶುಚಿತ್ವ ಇರುತ್ತದೆಯೋ ಅಲ್ಲಿ ಧನಾತ್ಮಕತೆ ಮತ್ತು ತಾಯಿ ಲಕ್ಷ್ಮಿ ನೆಲೆಸುತ್ತಾಳೆ.
7. ರಾತ್ರಿ ಸಮಯದಲ್ಲಿ ಸುಗಂಧಿ ದ್ರವ್ಯಗಳನ್ನು ಬಳಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಕಡೆಗೆ ಹೆಚ್ಚು ಆಕರ್ಷಿತವಾಗುತ್ತವೆ.