ಕೂದಲು ಆರೋಗ್ಯಕರವಾಗಿ ಬೆಳೆಯುವಂತೆ ಮಾಡಲು ಅಲೋವೆರಾವನ್ನು ಹೀಗೆ ಬಳಸಿ!
ಅಲೋವೆರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲೋವೆರಾವನ್ನು ಬಳಸುವುದು ಕೂದಲಿಗೆ ತುಂಬಾ ಒಳ್ಳೆಯದು.
ಅಲೋವೆರಾ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳೂ ಕಡಿಮೆಯಾಗುತ್ತವೆ.
ಅಲೋವೆರಾದಿಂದ ಎರಡು ಉಪಯೋಗಗಳಿವೆ. ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಹೆಚ್ಚಿಸಬಹುದು.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಎಲ್ಲರಿಗೂ ಕಾಡುತ್ತಿದೆ.. ಇದರಿಂದ ಕೂದಲು ತೆಳ್ಳಗಾಗುತ್ತದೆ.
ಆದರೆ ಈಗ ಕೂದಲು ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸುವುದು ಎಂದು ತಿಳಿಯೋಣ.
ಒಂದು ಸಣ್ಣ ಬಟ್ಟಲಲ್ಲಿ ನಾಲ್ಕು ಚಮಚ ಅಲೋವೆರಾಗೆ ಎರಡು ಚಮಚ ಆಲಿವ್ ಎಣ್ಣೆ.. ಎರಡು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ...ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಕೂದಲಿಗೆ ತುದಿಯಿಂದ ಬುಡದವರೆಗೂ ಹಚ್ಚಿಕೊಳ್ಳಿ.. ಇದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ..