ಕೂದಲು ಉದ್ದ ಬೆಳೆಯಬೇಕಾದರೆ ಮೊಟ್ಟೆಗೆ ಈ ವಸ್ತುಗಳನ್ನು ಬೆರೆಸಿ ಹಚ್ಚಿ

Ranjitha R K
Jan 22,2024

ಕೂದಲಿನ ಆರೋಗ್ಯ

ಮೊಟ್ಟೆ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಕೂದಲಿಗೆ ಮೊಟ್ಟೆ ಹಚ್ಚುವುದರಿಂದ ಕೂದಲು ದೃಢವಾಗಿ ಬೆಳೆಯುತ್ತದೆ.

ಆಲೋವಿರಾ ಜೆಲ್

ಮೊಟ್ಟೆಗೆ ಆಲೋವಿರಾ ಜೆಲ್ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಾಂತಿಯುಕ್ತವಾಗಿ ಬೆಳೆಯುತ್ತದೆ.

ಮೊಸರು

ಮೊಟ್ಟೆಯ ಜೊತೆಗೆ ಮೊಸರನ್ನು ಕೂಡಾ ಕೂದಲಿಗೆ ಹಚ್ಚಬೇಕು.ಇದರಿಂದ ಕೂದಲು ಶಕ್ತಿಯುತವಾಗಿ ಉದ್ದನೆ ಬೆಳೆಯುತ್ತದೆ.

ನಿಂಬೆ ರಸ

ಮೊಟ್ಟೆಯ ಜೊತೆ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿಯನ್ನು ಮೊಟ್ಟೆಯ ಜೊತೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು.ಇದರಿಂದ ಕೂದಳು ಬಿಳಿಯಾಗದಂತೆ ತಡೆಯುತ್ತದೆ. ಮಾತ್ರವಲ್ಲ, ಕೂದಲು ಉದುರುವುದು ಕೂಡಾ ಕಡಿಮೆಯಾಗುತ್ತದೆ.

ಜೇನುತುಪ್ಪ

ಮೊಟ್ಟೆಯ ಜೊತೆ ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಪ್ರೋಟಿನ್ ಸಿಗುತ್ತದೆ.

ತೆಂಗಿನ ಹಾಲು

ಮೊಟ್ಟೆಯ ಜೊತೆ ತೆಂಗಿನ ಹಾಲನ್ನು ಕೂದಲಿಗೆ ಹಚ್ಚಿದರೆ ಕೂದಲು ನಳನಳಿಸುತ್ತದೆ.

ತೆಂಗಿನೆಣ್ಣೆ

ತೆಂಗಿನೆಣ್ಣೆಯ ಜೊತೆ ಬೆರೆಸಿ ಮೊಟ್ಟೆಯನ್ನು ಕೂದಲಿಗೆ ಹಚ್ಚಬೇಕು.


ಸೂಚನೆ: ಈ ಲೇಖನ ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story