ಹೀಗೆ ಮಾಡಿದರೆ ಪೂರಿ ಗರಿ ಗರಿಯಾಗಿ ಬರುತ್ತದೆ

Ranjitha R K
Feb 10,2023


ಪೂರಿ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ತಿಂಡಿ. ಇದನ್ನು ತಯಾರಿಸುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಬೇಕು.


ಪೂರಿಗಾಗಿ ಹಿಟ್ಟು ತಯಾರಿಸುವಾಗ ಅದಕ್ಕೆ ಎಣ್ಣೆ ಅಥವಾ ತುಪ್ಪ ಬೆರೆಸಲು ಮರೆಯಬೇಡಿ. ಹೀಗೆ ಮಾಡಿದಾಗ ಪೂರಿ ಗರಿ ಗರಿಯಾಗಿ ಬರುತ್ತದೆ.


ಪೂರಿ ಕರಿಯುವಾಗ ಕೆಲವರು ಅತಿಯಾದ ಎಣ್ಣೆಯನ್ನು ಬಳಸುತ್ತಾರೆ. ಆದರೆ ಅತಿಯಾದ ಎಣ್ಣೆ ಬಳಸಿದರೆ ಪೂರಿ ಒಡೆದು ಬಿಡುತ್ತದೆ. ಹೀಗಾದಾಗ ಅದು ಉಬ್ಬುವುದಿಲ್ಲ.


ಪೂರಿ ಕರಿಯುವ ಮುನ್ನ ಹಿಟ್ಟನ್ನು 10 ರಿಂದ 15 ನಿಮಿಷಗಳವರೆಗೆ ಮುಚ್ಚಿಡಿ.


ಪೂರಿಗಾಗಿ ಹಿಟ್ಟು ಕಲಸುವಾಗ ಹಿಟ್ಟಿಗೆ ಕಸೂರಿ ಮೇಥಿ ಸೇರಿಸಿ. ಹೀಗೆ ಮಾಡಿದರೆ ಪೂರಿ ಗರಿಗರಿಯಾಗಿ ಬರುತ್ತದೆ.


ಪೂರಿಗೆ ಹಿಟ್ಟು ಕಲಸುವಾಗ ಗೋಧಿ ಹಿಟ್ಟಿನ ಜೊತೆ ಒಂದೆರಡು ಚಮಚ ರವೆ ಹಿಟ್ಟು ಸೇರಿಸಿ. ರವೇ ಪೂರಿಯನ್ನು ಗರಿ ಗರಿಯಾಗಿರುವಂತೆ ಮಾಡುತ್ತದೆ.


ಪೂರಿ ಗರಿ ಗರಿಯಾಗಬೇಕಾದರೆ ಕರಿಯುವ ಮುನ್ನ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಒಮ್ಮೆ ಎಣ್ಣೆ ಬಿಸಿಯಾದ ನಂತರ ಅದನ್ನು ಮಧ್ಯಮ ಉರಿಯಲ್ಲಿ ಇಟ್ಟುಕೊಳ್ಳಿ.

VIEW ALL

Read Next Story