ಬಿಸಿಲಿನಿಂದಾಗಿ ಟ್ಯಾನಿಂಗ್ ಆಗಿರಬಹುದು ಅಥವಾ ವಯಸ್ಸಾದ ಗುಣಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಟೊಮಾಟೊ ತುಂಬಾ ಪ್ರಯೋಜನಕಾರಿ ಆಗಿದೆ
ಟೊಮೆಟೋವನ್ನು ಆಹಾರಕ್ಕಾಗಿ ಮಾತ್ರವಲ್ಲ ಉತ್ತಮ ಸೌಂದರ್ಯವರ್ಧಕವಾಗಿಯೂ ಬಳಸಬಹುದು.
ನಿಮ್ಮ ಮುಖದ ಮೇಲೆ ಮೂಡಿರುವ ಕಲೆಗಳನ್ನು ನಿವಾರಿಸಲು ಟೊಮೇಟೊ ಫೇಸ್ ಪ್ಯಾಕ್ ತುಂಬಾ ಪ್ರಯೋಜನಕಾರಿ ಆಗಿದೆ.
ಟೊಮೆಟೊದ ತುಂಡನ್ನು ತೆಗೆದುಕೊಂಡು ಮುಖಕ್ಕೆ ವೃತ್ತಾಕಾರವಾಗಿ 10 ನಿಮಿಷಗಳ ಕಾಲ ಹಚ್ಚಿ ಬಳಿಕ ಫೇಸ್ ವಾಶ್ ಮಾಡುವುದರಿಂದ ಮೊಡವೆಯಿಂದ ಮುಕ್ತಿ ಪಡೆಯಬಹುದು.
ಟೊಮೇಟೊ ತುಂಡನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ತ್ವಚೆಯ ಮೇಲೆ ಉಜ್ಜಿಕೊಳ್ಳಿ. ಇದು ಸ್ಕ್ರಬ್ಬರ್ನಂತೆ ಕಾರ್ಯನಿರ್ವಹಿಸುತ್ತದೆ.
ಟೊಮಾಟೊ ಸ್ಲೈಸ್ ತೆಗೆದುಕೊಂಡು ಮುಖಕ್ಕೆ ಉಜ್ಜಿ, ಬಳಿಕ ತಣ್ಣೀರಿನಿಂದ ತೊಳೆಯುವುದರಿಂದ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು
ನಿಮ್ಮ ಸ್ಕಿನ್ ಟ್ಯಾನಿಂಗ್ ಆಗಿದ್ದರೆ ಒಂದು ತಾಜಾ ಟೊಮೆಟೊ ಮತ್ತು 1/2 ಕಪ್ ಮೊಸರನ್ನು ಮಿಶ್ರಣ ಮಾಡಿ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದ್ರಾವಣವನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ವಾಶ್ ಮಾಡಿ.
ನಿರ್ದಿಷ್ಟ ಪ್ರಮಾಣದ ಟೊಮಾಟೊ ರಶದೊಂದಿಗೆ ಅಷ್ಟೇ ಪ್ರಮಾಣದ ಸೌತೆಕಾಯಿ ರಸವನ್ನು ಬೆರೆಸಿ ಹಚ್ಚಿ. 10-15 ನಿಮಿಷಗಳ ಬಳಿಕ ವಾಶ್ ಮಾಡಿ ಇದರಿಂದ ಎಣ್ಣೆಯುಕ್ತ ಚರ್ಮದಿಂದ ಪರಿಹಾರ ಪಡೆಯಬಹುದು.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.