ಅತಿಯಾದ ಅರಿಶಿನ ಬಳಕೆಯ ಟಾಪ್ 5 ಅನಾನುಕೂಲಗಳು
ಅರಿಶಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಅದರಲ್ಲೂ ಚರ್ಮದ ಆರೋಗ್ಯಕ್ಕೆ ಅರಿಶಿನ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
ಆದರೆ, ಅರಿಶಿನದಿಂದ ಕೇವಲ ಅನುಜ್ಕೂಯಾಲ ಮಾತ್ರವಲ್ಲ, ಅದರ ಅತಿಯಾದ ಬಳಕೆಯು ಅನೇಕ ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡುತ್ತದೆ.
ಹಾಗಿದ್ದರೆ ಅರಿಶಿನದ ಅತಿಯಾದ ಬಳಕೆಯಿಂದ ಉಂಟಾಗಬಹುದಾದ ಟಾಪ್ 5 ಅಡ್ಡ ಪರಿಣಾಮಗಳು ಯಾವುವು ಎಂದು ನೋಡುವುದಾದರೆ...
ಅರಿಶಿನದ ಅತಿಯಾದ ಬಳಕೆಯು ಉದರ ಸಮಸ್ಯೆಯನ್ನು ಉಲ್ಬಣಿಸುತ್ತದೆ.
ನೀವು ಹೆಚ್ಚಾಗಿ ಅರಿಶಿನ ಬಳಿಸಿದರೆ ಎದೆಯುರಿ, ಆಮ್ಲೀಯತೆಯಂತಹ ಸಮಸ್ಯೆಗಳನ್ನು ಹೆಚ್ಚಿಸಲಿದೆ.
ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಪೂರಕಗಳನ್ನು ತೆಗೆದುಕೊಳ್ಳುವ ಜನರಲ್ಲಿ ವಾಕರಿಕೆ ಸಮಸ್ಯೆ ಹೆಚ್ಚು ಕಾಡುತ್ತದೆ.
ಅರಿಶಿನವು ಹೆಪ್ಪುಗಟ್ಟುವಿಕೆಯ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಅರಿಶಿನದ ಹೆಚ್ಚಿನ ಸೇವನೆಯು ನಮ್ಮ ಮೂತ್ರಪಿಂಡದಲ್ಲಿ ಸಮಸ್ಯೆ ಉಲ್ಬಣಿಸಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.