ಹಳೆಯ ಮತ್ತು ಒಣಗಿ ಗಟ್ಟಿಯಾಗಿರುವ ನೈಲ್ ಪಾಲಿಶ್ ಅನ್ನುವ ಎಸೆಯುವ ಅಗತ್ಯವಿಲ್ಲ. ಈ ವಿಧಾನಗಳನ್ನು ಪ್ರಯತ್ನಿಸುವ ಮೂಲಕ ಅದನ್ನು ಮತ್ತೆ ಬಳಸಬಹುದು.
. ಅನೇಕ ಬಾರಿ ಹಾಗೆ ಬಿಟ್ಟರೆ ನೈಲ್ ಪಾಲಿಶ್ ಒಣಗಿ ಹೋಗುತ್ತದೆ. ಒಣಗಿದೆ ಎಂದ ಕೂಡಲೇ ಅದನ್ನು ಮತ್ತೆ ಬಳಸಲು ಸಾಧ್ಯವಿಲ್ಲ ಎಂದು ಎಸೆದು ಬಿಡುವವರೇ ಹೆಚ್ಚು.
ನೈಲ್ ಪಾಲಿಶ್ ಅನ್ನು ಫ್ರಿಜ್ ನಲ್ಲಿ ಅದು ಬೇಗನೆ ಹಾಳಾಗುತ್ತದೆ. ಅದು ಅಲ್ಲೇ ಹೆಪ್ಪು ಗಟ್ಟಲು ಆರಂಭಿಸುತ್ತದೆ.
ಗಟ್ಟಿಯಾಗಿರುವ ನೈಲ್ ಪಾಲಿಶ್ ಅನ್ನು ಮತ್ತೆ ಬಳಸಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬಿಸಿ ಮಾಡಿ. ಆ ನೀರಿನಲ್ಲಿ ಗಟ್ಟಿಯಾಗಿರುವ ನೈಲ್ ಪಾಲಿಶ್ ಬಾಟಲಿಯನ್ನು ಡಿಪ್ ಮಾಡಿ. ಸುಮಾರು 20 ನಿಮಿಷಗಳವರೆಗೆ ನೈಲ್ ಪಾಲಿಶ್ ಅನ್ನು ಅಲ್ಲಿಯೇ ಬಿಟ್ಟು ಬಿಡಿ. ನಂತರ ಬಾಟಲಿಯನ್ನು ಸರಿಯಾಗಿ ಶೇಕ್ ಮಾಡಿ.
ಗಟ್ಟಿಯಾಗಿರುವ ನೈಲ್ ಪಾಲಿಶ್ ಗೆ ಥಿನ್ನರ್ ಬಳಸಿ ಮತ್ತೆ ಸರಿ ಮಾಡಬಹುದು.
ನೈಲ್ ಪಾಲಿಶ್ ಅನ್ನು ಸುಮಾರು 15 ನಿಮಿಷಗಳವರೆಗೆ ಬಿಸಿಲಿನಲ್ಲಿ ಇಟ್ಟರೆ ಕೂಡಾ ಮತ್ತೆ ಬಳಸಲು ಯೋಗ್ಯವಾಗುತ್ತದೆ.
ಇನ್ನು ನೈಲ್ ಪಾಲಿಶ್ ಹಚ್ಚುವಾಗ ಯಾವುದೇ ಕಾರಣಕ್ಕೆ ಫ್ಯಾನ್ ಆನ್ ಮಾಡಿಟ್ಟುಕೊಳ್ಳಬೇಡಿ. ಫ್ಯಾನ್ ಕೆಳಗೆ ನೈಲ್ ಪಾಲಿಶ್ ಇಟ್ಟರೆ ನೈಲ್ ಪಾಲಿಶ್ ಗಟ್ಟಿಯಾಗುತ್ತದೆ.
ನೈಲ್ ಪಾಲಿಶ್ ಅನ್ನು ಯಾವಾಗಲೂ ರೂಂ ಟೆಂಪರೆಚರ್ ನಲ್ಲಿಯೇ ಇಡಬೇಕು. ಕೆಲವರಿಗೆ ಫ್ರಿಜ್ ನಲ್ಲಿ ಇದುವ ಅಭ್ಯಾಸ ಇರುತ್ತದೆ. ಇದು ತಪ್ಪು.