ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ, ಬೆವರಿನಿಂದಾಗಿ ಚರ್ಮದ ದದ್ದು, ಸ್ಕಿನ್ ರಾಶಸ್ ಒಂದು ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಬೇಕಿಂಗ್ ಅಥವಾ ಅಡುಗೆ ಸೋಡಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಶಾಖ ಮತ್ತು ಬೆವರುವಿಕೆಯಿಂದ ದೇಹದ ಮೇಲೆ ಉಂಟಾಗುವ ಸೋಂಕನ್ನು ತಡೆಯಲು ಇದು ಸಹಾಯ ಮಾಡುತ್ತದೆ.
ಅರಿಶಿನವು ಆ್ಯಂಟಿಬಯೋಟಿಕ್ ಗುಣಗಳಿಂದ ಸಮೃದ್ಧವಾಗಿದೆ ಎಂದು ನಿಮಗೆ ತಿಳಿದೇ ಇದೆ. ಈ ಅರಿಶಿನದೊಂದಿಗೆ ಸಮಾನ ಪ್ರಮಾಣದ ಉಪ್ಪು, ಮೆಂತ್ಯಯನ್ನು ಒಟ್ಟಿಗೆ ಬೆರೆಸಿ ರುಬ್ಬಿ ಪೇಸ್ಟ್ ತಯಾರಿಸಿ. ಸ್ನಾನ ಮಾಡುವ 5 ನಿಮಿಷ ಮೊದಲು ಇದನ್ನು ಹಚ್ಚಿ ಸ್ನಾನ ಮಾಡಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಬಿಸಿಲಿನ ಬೇಗೆಯಿಂದ ಉಂಟಾಗುವ ಚರ್ಮದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಬೆವರಿನ ಗುಳ್ಳೆಗಳಿಗೆ ಬಹಳ ಹಿಂದಿನಿಂದಲೂ ಮುಲ್ತಾನಿ ಮಿಟ್ಟಿಯನ್ನು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್‌ನಲ್ಲಿ ಬೆರೆಸಿ ಹಚ್ಚಿ. ಅದು ಡ್ರೈ ಆದ ಬಳಿಕ ತೊಳೆಯಿರಿ. ಎರಡರಿಂದ ಮೂರು ದಿನ ಇದನ್ನು ಬಳಸುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಮಾವಿನ ಕಾಯಿಯನ್ನು ಸಣ್ಣಗೆ ಹಚ್ಚಿ ಬಾಣಲೆಯಲ್ಲಿ ಹುರಿದುಕೊಳ್ಳಿ. ಅದು ತಣ್ಣಗಾದ ಬಲಿಕಲ್ ತೀರುಳನ್ನೂ ತೆಗೆದು ಫ್ರಿಡ್ಜ್ ನಳ್ಳಿಡಿ. ಅದು ತಣ್ಣಗಾದ ನಂತರ ಆ ತಿರುಳನ್ನು ದೇಹಕ್ಕೆ ಹಚ್ಚಿ. ಈ ರೀತಿ ಮಾಡುವುದರಿಂದ ಚರ್ಮವನ್ನು ಶಾಖದಿಂದ ರಕ್ಷಿಸಬಹುದು.
ಸಮಪ್ರಮಾಣದ ಶ್ರೀಗಂಧದ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ ಮತ್ತು ಅದಕ್ಕೆ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ದೇಹಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಸ್ನಾನ ಮಾಡಿ. ಇದರಿಂದ ಚರ್ಮದ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ಔಷದ ಎಂದರೆ ಅಲೋವೆರಾ. ಅಲೋವೆರಾ ಎಲೆಯಿಂದ ಜೆಲ್ ಅನ್ನು ಹೊರತೆಗೆದು ಅದನ್ನು ;ಪೀಡಿತ ಪ್ರದೇಶಕ್ಕೆ ಅಪ್ಪ್ಲೈ ಮಾಡಿ. ಬಳಿಕ 10-15 ನಿಮಿಷಗಳ ನಂತರ ತಣ್ಣೀರಿನಿಂದ ಸ್ನಾನ ಮಾಡಿ. ಇದು ನಿಮ್ಮನ್ನು ಚರ್ಮದ ಹಲವು ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.