ಬೇಸಿಗೆಯಲ್ಲಿ ತ್ವಚೆಯ ಆರೈಕೆಗಾಗಿ ಶ್ರೀಗಂಧದ ಈ ಫೇಸ್ ಪ್ಯಾಕ್‌ಗಳನ್ನು ಟ್ರೈ ಮಾಡಿ

Published by: Yashaswini V | Mar 15, 2023

ಹಾಲಿನೊಂದಿಗೆ ಶ್ರೀಗಂಧ

ಹಾಲಿನೊಂದಿಗೆ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಕಳೆಗಳನ್ನು ನಿವಾರಿಸಬಹುದು.

Published by: Yashaswini V | Mar 15, 2023

ಅರಿಶಿನ ಮತ್ತು ಶ್ರೀಗಂಧ

ಒಂದು ಚಮಚ ಶ್ರೀಗಂಧದ ಪುಡಿಯಲ್ಲಿ ಒಂದು ಚಿಟಿಕೆ ಅರಿಶಿನ ಬೆರೆಸಿ ಪ್ಯಾಕ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖ, ಕುತ್ತಿಗೆಯ ಭಾಗಕ್ಕೆ ಹಚ್ಚಿ ಅದು ಒಣಗಿನ ಮೇಲೆ ಫಾಸೆ ವಾಶ್ ಮಾಡಿ.

Published by: Yashaswini V | Mar 15, 2023

ಶ್ರೀಗಂಧ ಮತ್ತು ಮುಲ್ತಾನಿ ಮಿಟ್ಟಿ

ಶ್ರೀಗಂಧದ ಪುಡಿಯೊಂದಿಗೆ ಮುಲ್ತಾನಿ ಮಿಟ್ಟಿ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಸ್ಕ್ರಬ್ ಮಾಡಿ ತೆಗೆಯಿರಿ. ಇದು ಎಣ್ಣೆಯುಕ್ತ ಚರ್ಮದ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.

Published by: Yashaswini V | Mar 15, 2023

ಶ್ರೀಗಂಧ ಮತ್ತು ಜೇನುತುಪ್ಪ

ಶ್ರೀಗಂಧದ ಪುಡಿಯಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಹಚ್ಚಿ. ಅದು ಡ್ರೈ ಆದ ಬಳಿಕ ಲಘುವಾಗಿ ಮಸಾಜ್ ಮಾಡುತ್ತಾ ಪ್ಯಾಕ್ ರಿಮೂವ್ ಮಾಡಿ. ಇದರಿಂದ ಡೆಡ್ ಸ್ಕಿನ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

Published by: Yashaswini V | Mar 15, 2023

ಶ್ರೀಗಂಧ ಮತ್ತು ಟೊಮಾಟೊ

ಶ್ರೀಗಂಧ ಮತ್ತು ಟೊಮಾಟೊ ರಸವನ್ನು ಮಿಶ್ರಣ ಮಾಡಿ ತಯಾರಿಸಿದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. ನಂತರ ರೋಸ್ ವಾಟರ್ ಬಳಸಿ ಲಘುವಾಗಿ ಮಸಾಜ್ ಮಾಡಿ ಪ್ಯಾಕ್ ಅನ್ನು ತೆಗೆಯಿರಿ. ಇದು ಮುಖದ ಮೇಲೆ ಸಂಗ್ರಹವಾಗಿರುವ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.

Published by: Yashaswini V | Mar 15, 2023

ಶ್ರೀಗಂಧ ಮತ್ತು ಎಳನೀರು

ಎಳನೀರಿನೊಂದಿಗೆ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

Published by: Yashaswini V | Mar 15, 2023

VIEW ALL

Read Next Story