ಉದ್ದ ದಟ್ಟ ಕೂದಲಿಗೆ ನೆಲ್ಲಿಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನೆಲ್ಲಿಕಾಯಿ ಬಳಕೆಯಿಂದ ಕೂದಲಿನ ನಾನಾ ರೀತಿಯ ಸಮಸ್ಯೆ ನಿವಾರಣೆಯಾಗುತ್ತದೆ. ದಟ್ಟ , ಉದ್ದನೆಯ ಕಪ್ಪು ಕೂದಲಿಗೆ ನೆಲ್ಲಿಕಾಯಿ ಬಳಕೆ ಹೇಗೆ ನೋಡೋಣ,
ನೆಲ್ಲಿಕಾಯಿ ಎಣ್ಣೆ ಮಾಡಲು ಬೇಕಾಗುವ ಸಾಮಾಗ್ರಿ ನೆಲ್ಲಿಕಾಯಿ, ತೆಂಗಿನೆಣ್ಣೆ, ಮತ್ತು ಆಲಿವ್ ಎಣ್ಣೆ
ನೆಲ್ಲಿಕಾಯಿಯನ್ನು ರುಬ್ಬಿ ಅದರ ರಸ ತೆಗೆದುಕೊಳ್ಳಿ. ನಂತರ ಸ್ವಲ್ಪ ತೆಂಗಿನೆಣ್ಣೆ ಮತ್ತು ಆಲಿವ್ ಎಣ್ಣೆ ಹಾಕಿ. ಈ ಮಿಶ್ರಣವನ್ನು 15 ನಿಮಿಷ ಮಂದ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ತಣ್ಣಗಾದ ಮೇಲೆ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ.
ಕೂದಲಿಗೆ ಹಚ್ಚುವ ಮುನ್ನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ನೆತ್ತಿ ಮೇಲೆ ಮಸಾಜ್ ಮಾಡಿಕೊಳ್ಳಿ. ಮಾರನೇ ದಿನ ಕೂದಲನ್ನು ತೊಳೆಯಿರಿ.
ಈ ಎಣ್ಣೆಯಲ್ಲಿ ವಿಟಮಿನ್ ಇ, ಹೆಲ್ದಿ ಫ್ಯಾಟ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಇದು ಕೂದಲು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ನಿತ್ಯ ಕೂದಲಿಗೆ ನೆಲ್ಲಿಕಾಯಿ ಎಣ್ಣೆ ಹಚ್ಚುವುದರಿಂದ ಕೂದಲು ಸುಂದರವಾಗುತ್ತದೆ.
ಕೂದಲಿಗೆ ನೆಲ್ಲಿಕಾಯಿ ಎಣ್ಣೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ನೆಲ್ಲಿಕಾಯಿ ಎಣ್ಣೆ ಬಳಸುವುದರಿಂದ ನೆತ್ತಿ ತುರಿಕೆ, ತಲೆಹೊಟ್ಟು ಮುಂತಾದ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.