ಬೇಸಿಗೆಯಲ್ಲಿ ಆರೋಗ್ಯಕರ ಕೂದಲಿಗಾಗಿ ಮೊಸರನ್ನು ಈ ರೀತಿ ಬಳಸಿ

Published by: Yashaswini V | Mar 29, 2023

ಮೊಸರು- ಆಲೂಗೆಡ್ಡೆ ಹೇರ್ ಮಾಸ್ಕ್

ಮೊಸರು ಮತ್ತು ಆಲೂಗೆಡ್ಡೆ ಹೇರ್ ಮಾಸ್ಕ್ ನೆತ್ತಿಯ ಕೊಳೆಯನ್ನು ಸ್ವಚ್ಛಗೊಳಿಸಲು ಮತ್ತು ತಲೆಹೊಟ್ಟು ಹೋಗಲಾಡಿಸಲು ಸಹಕಾರಿಯಾಗಿದೆ. ಇದು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.

Published by: Yashaswini V | Mar 29, 2023

ಮೊಸರಿನೊಂದಿಗೆ ಕರಿಬೇವಿನ ಸೊಪ್ಪು

ಒಂದು ಹಿಡಿ ಕರಿಬೇವಿನ ಎಲೆಗಳನ್ನು ಪುಡಿಮಾಡಿ ಮತ್ತು ಈ ಪೇಸ್ಟ್ ಅನ್ನು ಒಂದು ಕಪ್ ಮೊಸರಿನಲ್ಲಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ಬುಡದಿಂದ ತುದಿಯವರೆಗೆ ಕೂದಲಿಗೆ ಅಪ್ಪ್ಲೈ ಮಾಡಿ. ಒಂದು ಗಂಟೆ ಬಳಿಕ ವಾಶ್ ಮಾಡಿ.

Published by: Yashaswini V | Mar 29, 2023

ಮೊಸರು-ನಿಂಬೆ ಹೇರ್ ಮಾಸ್ಕ್

ಕೂದಲಿಗೆ ಮೊಸರಿನೊಂದಿಗೆ ನಿಂಬೆ ರಸವನ್ನು ಬಳಸುವುದರಿಂದ ಪ್ರಯೋಜನಗಳಿವೆ. ಒಂದು ಬೌಲ್ ಮೊಸರಿಗೆ ಎರಡು ಚಮಚ ನಿಂಬೆ ರಸ, 2-4 ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಲೇಪಿಸಿ. 20 ನಿಮಿಷಗಳ ಬಳಿಕ ಕೂದಲನ್ನು ತೊಳೆಯಿರಿ. ಇದರಿಂದ ಕಾಂತಿಯುತ, ಉದ್ದ ಕೂದಲು ನಿಮ್ಮದಾಗುತ್ತದೆ. ಮಾತ್ರವಲ್ಲ, ತಲೆಹೊಟ್ಟಿನ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ.

Published by: Yashaswini V | Mar 29, 2023

ಮೊಸರು ಮತ್ತು ಮುಲ್ತಾನಿ ಮಿಟ್ಟಿ

ಕೂದಲು ಉದುರುವ ಸಮಸ್ಯೆ ಇದ್ದರೆ, ನೀವು ಮೊಸರು, ಮುಲ್ತಾನಿ ಮಿಟ್ಟಿ ಮತ್ತು ತ್ರಿಫಲಾದಿಂದ ಮಾಡಿದ ಹೇರ್ ಮಾಸ್ಕ್ ಅನ್ನು ಬಳಸುವುದರಿಂದ ಶೀಘ್ರದಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು.

Published by: Yashaswini V | Mar 29, 2023

ಮೊಸರಿನೊಂದಿಗೆ ಮೊಟ್ಟೆ

ಮ್ನೊಸರಿನೊಂದಿಗೆ ಮೊಟ್ಟೆಯನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ ಸುಮಾರು 1 ಗಂಟೆ ಬಳಿಕ ತಲೆಯನ್ನು ತೊಳೆಯಿರಿ. ಇದು ಕೂದಲು ಉದುರುವಿಕೆ, ಕೂದಲು ಡ್ಯಾಂಡ್ರಫ್ ಮತ್ತು ಕೂದಲಿನ ಶುಷ್ಕತೆಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

Published by: Yashaswini V | Mar 29, 2023

ಮೊಸರು-ಬಾಳೆಹಣ್ಣು

ಬಾಳೆಹಣ್ಣು ಮತ್ತು ಮೊಸರಿನ ಮಿಶ್ರಣವು ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ. ಇದಕ್ಕಾಗಿ, ಒಂದು ಚಮಚ ಮೊಸರಿಗೆ ಅರ್ಧ ಮಾಗಿದ ಬಾಳೆಹಣ್ಣು, 3 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ಬುಡದಿಂದ ತುದಿಯವರೆಗೆ ಕೂದಲಿಗೆ ಹಚ್ಚಿ ಅರ್ಧಗಂಟೆ ಬಳಿಕ ಹೇರ್ ವಾಶ್ ಮಾಡಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

Published by: Yashaswini V | Mar 29, 2023

VIEW ALL

Read Next Story