ಈ ಕಾರಣಗಳಿಗಾಗಿ ಅಡುಗೆಯಲ್ಲಿ ಕಾಳು ಮೆಣಸಿನ ಬಳಕೆಯಾಗಲೇ ಬೇಕು

ಕಾಳು ಮೆಣಸನ್ನು ಮಸಾಲೆಗಳ ರಾಜ ಎಂದು ಕರೆಯಲಾಗುತ್ತದೆ. ಬನ್ನಿ ಇಂದು ಈ ಮಸಾಲೆಯ ಉಪಯೋಗ ತಿಳಿಯೋಣ.

Ranjitha R K
Jul 07,2023


ಕಾಳು ಮೆಣಸು ಆಂಟಿ ವೈರಲ್ ಗುಣವನ್ನು ಹೊಂದಿರುತ್ತದೆ. ಇದು ಇನ್ಫೆಕ್ಷನ್ ಮತ್ತು ಸಾಂಕ್ರಾಮಿಕ ರೋಗವನ್ನು ಹತ್ತಿರ ಸುಳಿಯದಂತೆ ತಡೆಯುತ್ತದೆ.


ಅಡುಗೆಯಲ್ಲಿ ಕರಿ ಮೆಣಸು ಬಳಸುವುದರಿಂದ ಅಡುಗೆಯ ರುಚಿ ಹೆಚ್ಚುತ್ತದೆ.


ಕೆಲವೊಮ್ಮೆ ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯ ನಿವಾರಣೆಗಾಗಿ ಕೂಡಾ ಕರಿ ಮೆಣಸು ಬಳಸಲಾಗುತ್ತದೆ.


ಕರಿಮೆಣಸಿನ ಔಷಧೀಯ ಗುಣಗಳ ಕಾರಣದಿಂದಾಗಿ ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.


ಕರಿ ಮೆಣಸಿನಲ್ಲಿ ಮೈಪರಿನ್ ಅಂಶ ಇರುತ್ತದೆ. ಹೀಗಾಗಿ ಇದು ಮೆದುಳಿ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಅಲ್ಲದೆ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.


ಜೀರ್ಣಶಕ್ತಿಯ ಸಮಸ್ಯೆ ಇದ್ದರೆ ಕರಿ ಮೆಣಸನ್ನು ತಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದು.


ಕರಿ ಮೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಶ್ವಾಸಕೋಶದ ಆರೋಗ್ಯಕ್ಕೆ ಕರಿ ಮೆಣಸು ಸಹಾಯ ಮಾಡುತ್ತದೆ.


ದೇಹದ ಕೊಬ್ಬು ಕರಗಿಸಲು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಅಡುಗೆಯಲ್ಲಿ ಕರಿ ಮೆಣಸನ್ನು ಸೇರಿಸಿಕೊಳ್ಳಬಹುದು.

VIEW ALL

Read Next Story