ಕೂದಲು ಸ್ಟ್ರೈಟ್ ಇದ್ದರೆ ಮುಖದ ಲುಕ್ ಸಂಪೂರ್ಣ ಬದಲಾಗುತ್ತದೆ. ಈ ಕಾರಣಕ್ಕಾಗಿ ಬಹುತೇಕ ಎಲ್ಲರೂ ಕೂದಲು ಸ್ಟ್ರೈಟ್ ಮಾಡಲು ಬಯಸುತ್ತಾರೆ.
ಆದರೆ ಈ ಪ್ರಕ್ರಿಯೆಗೆ ಹೆಚ್ಚು ಹಣ ವ್ಯಾಯ ಮಾಡಬೇಕಾಗುತ್ತದೆ. ಇದರ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಕೂದಲು ಸ್ಟ್ರೈಟ್ ಮಾಡುವುದು ಸಾಧ್ಯವಾಗುತ್ತದೆ.
ಒಂದು ಸ್ಪ್ರೇ ಬಾಟಲಿಗೆ ಒಂದು ಚಮಚ ಜೇನುತುಪ್ಪ ಹಾಕಿ. ನಂತರ 2-3 ಚಮಚ ಹಾಲು ಹಾಕಿ. ಬಾಟಲಿಯಲ್ಲಿರುವ ವಸ್ತುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಮೊದಲು ಕೂದಲನ್ನು ಚೆನ್ನಾಗಿ ಶಾಂಪೂ ಮಾಡಿ ತೊಳೆಯಿರಿ.
ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಿ. ಇದಕ್ಕಾಗಿ ಯಾವುದೇ ಹೇರ್ ಡ್ರೈಯರ್ ಬಳಸುವ ಅಗತ್ಯವಿಲ್ಲ. ಟವಲ್ ಮೂಲಕವೇ ಕೂದಲನ್ನು ಒಣಗಿಸಿಕೊಳ್ಳಿ.
ಈಗ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಕೂದಲಿಗೆ ಸ್ಪ್ರೇ ಮಾಡಿ. ನೀವು ಮಾಡಿರುವ ಸ್ಪ್ರೇ ಕೂದಲಿಗೆ ಸರಿಯಾಗಿ ಹರಡಿಕೊಂಡಿದೆಯೇ ಎನ್ನುವುದನ್ನು ನೋಡಿಕೊಳ್ಳಿ.
ಕೂದಲು ಒಣಗಿಸಿದ ನಂತರ ಮತ್ತೆ ಮೈಲ್ಡ್ ಶಾಂಪೂ ಬಳಸಿ ಕೂದಲಿಗೆ ಸ್ನಾನ ಮಾಡಿ.
ಜೇನು ತುಪ್ಪ ಸ್ಕ್ಯಾಲ್ಪ್ ಅನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಿಂದ ಸ್ಕ್ಯಾಲ್ಪ್ ಬ್ಯಾಕ್ಟೀರಿಯಾ ಮುಕ್ತವಾಗುತ್ತದೆ.
ನಿಮ್ಮ ಕೂದಲು ಕಾಂತಿ ಹೀನವಾಗಿದ್ದರೂ ಕೂಡಾ ಜೇನು ತುಪ್ಪ ಪ್ರಯೋಜನಕಾರಿಯಾಗಿದೆ.