ದಪ್ಪವಾಗಿ, ಕಪ್ಪಾಗಿರುವ ಕೂದಲನ್ನು ಯಾರು ಇಷ್ಟಪಡುವುದಿಲ್ಲ ಹೇಳಿ! ಪ್ರತಿ ಹೆಣ್ಣಿಗೂ ತನ್ನ ಕೂದಲು ಸುಂದರ ಮತ್ತು ಆರೋಗ್ಯಕರವಾಗಿರಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಪೋಷಣೆ ಮತ್ತು ಆರೈಕೆ ಎರಡೂ ಅಗತ್ಯ.
ಕೂದಲನ್ನು ಸುಂದರವಾಗಿಸಲು ಆರೈಕೆ ಮಾಡುವುದು ಮುಖ್ಯವಾಗಿದೆ. ನೆತ್ತಿಯ ಮಸಾಜ್, ಹೇರ್ ಮಾಸ್ಕ್, ಕಂಡೀಷನಿಂಗ್, ಎಲ್ಲಾ ವಿಷಯಗಳು ಕೂದಲ ಆರೈಕೆಯಲ್ಲಿ ಪ್ರಮುಖವಾಗಿವೆ. ಮತ್ತೊಂದೆಡೆ, ನೈಸರ್ಗಿಕ ಎಣ್ಣೆಯನ್ನು ಸಹ ಕೂದಲಿಗೆ ಬಳಸಿದರೆ, ಹೆಚ್ಚು ಪ್ರಯೋಜನ ನೀಡುತ್ತದೆದೆ.
ಅಕ್ಕಿ ಹೊಟ್ಟಿನಿಂದ ತಯಾರಿಸಿದ ಎಣ್ಣೆ ಅಂದರೆ ರೈಸ್ ಬ್ರಾನ್ ಆಯಿಲ್ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ರೈಸ್ ಬ್ರಾನ್ ಆಯಿಲ್ ಅನ್ನು ಸರಿಯಾಗಿ ಬಳಸಿದರೆ, ಅದು ಕೂದಲನ್ನು ದಪ್ಪವಾಗಿ ಮತ್ತು ಕೂದಲಿಗೆ ಹೊಳಪನ್ನು ಸಹ ನೀಡುತ್ತದೆ.
ರೈಸ್ ಬ್ರಾನ್ ಆಯಿಲ್ ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಇನೋಸಿಟಾಲ್ ಅನ್ನು ಹೊಂದಿದ್ದು, ತಲೆಹೊಟ್ಟು ಮತ್ತು ನಿರ್ಜೀವ ಕೂದಲಿನ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ರೈಸ್ ಬ್ರಾನ್ ಆಯಿಲ್ ನಲ್ಲಿ ಕಂಡುಬರುತ್ತವೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಲಿನೋಲಿಕ್ ಆಸಿಡ್ ಮತ್ತು ಓರಿಝಾನಾಲ್ ಎಂಬ ಸಂಯುಕ್ತವು ರೈಸ್ ಬ್ರಾನ್ ಆಯಿಲ್ ನಲ್ಲಿ ಕಂಡುಬರುತ್ತದೆ. ಇದು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ರೈಸ್ ಬ್ರಾನ್ ಆಯಿಲ್ ಬಳಸುವುದರಿಂದ ಕೂದಲಿನ ಬೇರುಗಳನ್ನು ಬಲಗೊಳ್ಳುತ್ತದೆ. ಜೊತೆಗೆ ತಲೆಹೊಟ್ಟು ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
4 ಟೀ ಚಮಚ ತೆಂಗಿನ ಎಣ್ಣೆಯೊಂದಿಗೆ ಒಂದಿಷ್ಟು ಹನಿ ರೈಸ್ ಬ್ರಾನ್ ಆಯಿಲ್ ಮಿಶ್ರಣ ಮಾಡಿ. ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. 30 ರಿಂದ 40 ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ಕಂಡಿಷನರ್ ಬಳಸಿ ಚೆನ್ನಾಗಿ ಕೂದಲನ್ನು ವಾಶ್ ಮಾಡಿ.
ಪ್ರಿಯ ಓದುಗರೇ, ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.