ತುಳಸಿ ಕೂದಲಿನ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಳಸಿಯನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯಕರವಾಗಿರುತ್ತದೆ.
ತುಳಸಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಎಲ್ಲರಿಗೂ ತಿಳಿದಿವೆ. ಇನ್ನು ಬಳಸುವುದರಿಂದ ತಲೆಹೊಟ್ಟು ಸುಲಭವಾಗಿ ನಿವಾರಣೆಯಾಗುತ್ತದೆ.
ತುಳಸಿಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್’ಗಳು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಕೂದಲಿನ ಹೊಳಪನ್ನು ಹಾಗೆಯೇ ಇರಿಸುತ್ತದೆ.
ಮೊದಲು ತುಳಸಿ ಎಲೆಗಳನ್ನು ಒಣಗಿಸಿ ಅದರ ಪುಡಿಯನ್ನು ತಯಾರಿಸಿ. ಇದಕ್ಕೆ ಒಂದು ಚಮಚ ಈರುಳ್ಳಿ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಬೇಕು. ಅರ್ಧ ಗಂಟೆ ಒಣಗಿದ ನಂತರ ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ತಾಜಾ ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ. 2 ಚಮಚ ತೆಂಗಿನ ಎಣ್ಣೆ ಸೇರಿಸಿ, ಈ ಮಿಶ್ರಣವನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು 45 ನಿಮಿಷಗಳ ಕಾಲ ಇರಿಸಿ. ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ಇದು ಕೂದಲು ಉದುರುವಿಕೆಗೆ ಬೆಸ್ಟ್.
2 ಚಮಚ ತುಳಸಿ ಪುಡಿಗೆ ಒಂದು ಚಮಚ ಮೊಸರು ಮತ್ತು 1/2 ಅಲೋವೆರಾ ಜೆಲ್ ಹಾಕಿ ಮಿಶ್ರಣ ಮಾಡಿ. ಇದನ್ನು ತಲೆಯ ಬುಡಕ್ಕೆ ಹಚ್ಚಿ 45 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ, ಕೂದಲಿನ ತುದಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ.
2 ಚಮಚ ತುಳಸಿ ಪುಡಿಯನ್ನು 1 ಚಮಚ ಆಮ್ಲಾ ಪೌಡರ್ ಮತ್ತು 1/2 ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ. 45 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಡಾಂಡ್ರಫ್ ಸಮಸ್ಯೆ ದೂರವಾಗುತ್ತದೆ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.