ಲವಂಗ ಎಣ್ಣೆಯಲ್ಲಿರುವ ಈ ಮ್ಯಾಜಿಕ್‌ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

Published by: Zee Kannada News Desk | Jun 16, 2024

ಹಲ್ಲುನೋವು..ನಮ್ಮನ್ನು ಸಾಯಿಸಿಯೇ ಬಿಡುತ್ತದೆ. ಈ ನೋವು ಸಹಿಸಲು ಸಾಧ್ಯವೇ ಇಲ್ಲ. ಏನು ತಿನ್ನಲು ಅಥವಾ ಕುಡಿಯಲು ಆಗುವುದಿಲ್ಲ . ಹಲ್ಲುನೋವಿನ ಜೊತೆಗೆ ತಲೆನೋವು ಕೂಡ ಬರುತ್ತದೆ. ಆ ನೋವು ಹೇಗಿರುತ್ತದೆ ಎಂಬುದು ಈ ಸಮಸ್ಯೆಯನ್ನು ಎದುರಿಸಿದವರಿಗೇ ಗೊತ್ತು. ಆದಾಗ್ಯೂ, ಈ ಸಮಸ್ಯೆಯನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳು ಉತ್ತಮವಾಗಿ ಕೆಲಸ ಮಾಡುತ್ತವೆ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ಲವಂಗಗಳು ಹಲ್ಲುನೋವಿಗೆ ಅದ್ಭುತಗಳನ್ನು ಮಾಡುತ್ತದೆ. ಲವಂಗದ ಎಣ್ಣೆ ಹಲ್ಲು ನೋವಿಗೆ ತುಂಬಾ ಒಳ್ಳೆಯದು. ಹಾಗಾದರೆ ಲವಂಗದ ಎಣ್ಣೆಯನ್ನು ಹೇಗೆ ತಯಾರಿಸುವುದು ಮತ್ತು ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ.

Published by: Zee Kannada News Desk | Jun 16, 2024

ಹಲ್ಲಿನ ಆರೋಗ್ಯ

ಲವಂಗದ ಎಣ್ಣೆಯು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲವಂಗದ ಎಣ್ಣೆಯನ್ನು ವಸಡಿನ ಬಳಿ ಹಚ್ಚುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ.

Published by: Zee Kannada News Desk | Jun 16, 2024

ಉರಿಯೂತ

ಲವಂಗದ ಎಣ್ಣೆಯು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇವು ತ್ವಚೆಯನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿಲು ಸಹಾಯ ಮಾಡುತ್ತದೆ.

Published by: Zee Kannada News Desk | Jun 16, 2024

ತುರಿಕೆ

ಈ ಎಣ್ಣೆಯನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ವಿರೋಧಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಲವಂಗದ ಎಣ್ಣೆಯು ವಿವಿಧ ರೂಪಗಳಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

Published by: Zee Kannada News Desk | Jun 16, 2024

ಲಿವರ್‌

ಲವಂಗದ ಎಣ್ಣೆ ಯಕೃತ್ತನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಈ ಎಣ್ಣೆಯಲ್ಲಿರುವ ಸಂಯುಕ್ತಗಳು ಕೊಬ್ಬಿನ ಲಿವರ್ ಸಮಸ್ಯೆಯ ವಿರುದ್ಧ ಹೋರಾಡುತ್ತವೆ.

Published by: Zee Kannada News Desk | Jun 16, 2024

ಮೂಳೆ

ಲವಂಗದ ಎಣ್ಣೆಯನ್ನು ವಿವಿಧ ರೂಪಗಳಲ್ಲಿ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಆಸ್ಟಿಯೊಪೊರೋಸಿಸ್ ಅನ್ನು ತಪ್ಪಿಸಬಹುದು.

Published by: Zee Kannada News Desk | Jun 16, 2024

ಚರ್ಮ

ಲವಂಗದ ಎಣ್ಣೆಯನ್ನು ಹಚ್ಚುವುದರಿಂದ ಚರ್ಮವು ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ. ಒಣ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಲವಂಗದ ಎಣ್ಣೆಯನ್ನು ಹಚ್ಚಿದರೆ ಕಣ್ಣಿನ ಕೆಳಗಿನ ಚರ್ಮ ಊದಿಕೊಳ್ಳುವಂತಹ ಸಮಸ್ಯೆಗಳು ಬರುವುದಿಲ್ಲ.

Published by: Zee Kannada News Desk | Jun 16, 2024

ತಯಾರಿಸುವ ವಿಧಾನ

ಲವಂಗವನ್ನು ಬೇಕಾದಷ್ಟು ತೆಗೆದುಕೊಂಡು ಚೆನ್ನಾಗಿ ನುಜ್ಜುಗುಜ್ಜು ಮಾಡಿ, ಗಾಜಿನ ಜಾರ್‌ನಲ್ಲಿ ಹಾಕಿ, ಲವಂಗವನ್ನು ಮುಳುಗಿಸುವಷ್ಟು ಆಲಿವ್ ಎಣ್ಣೆಯನ್ನು ಸೇರಿಸಿ ಮುಚ್ಚಿ. ನಂತರ ನೇರ ಸೂರ್ಯನ ಬೆಳಕಿನಲ್ಲಿ ಒಂದು ವಾರ ಇರಿಸಿ. ಇದೀಗ ಈ ಎಣ್ಣೆ ಬಳಸಲು ರೆಡಿ.

Published by: Zee Kannada News Desk | Jun 16, 2024

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Zee Kannada News Desk | Jun 16, 2024

VIEW ALL

Read Next Story