ಪ್ರತಿ ಮನೆಯಲ್ಲಿಯೂ ಬಾಣಲೆಯನ್ನು ಬಳಸುತ್ತಾರೆ. ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಲು ಬಾಣಲೆ ಬಳಸಲಾಗುತ್ತದೆ.
ಇದೇ ಬಾಣಲೆಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಮಾಡುವ ತಪ್ಪಿನಿಂದ ಕಷ್ಟವನ್ನು ಮೈ ಮೇಲೆ ಎಳೆದುಕೊಳ್ಳುವ ಹಾಗೆ ಆಗುತ್ತದೆ.
ಬಹುತೇಕ ಮನೆಗಳಲ್ಲಿ ಬಾಣಲೆಯನ್ನು ಉಲ್ಟಾ ಹಾಕಿ ಇಡಲಾಗುತ್ತದೆ. ವಾಸ್ತು ಪ್ರಕಾರ ಈ ಕ್ರಮ ಅತಿ ದೊಡ್ಡ ತಪ್ಪು ಎಂದು ಹೇಳಲಾಗುತ್ತದೆ. ಸಾಲದ ಮೂಲ ಇಲ್ಲಿಂದಲೇ ಆರಂಭವಾಗುವುದು ಎನ್ನಲಾಗುತ್ತದೆ.
ನೀವು ಕೂಡಾ ಮನೆಯಲ್ಲಿ ಈ ತಪ್ಪು ಮಾಡುತ್ತಿದ್ದರೆ ಇದರಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
ವಾಸ್ತು ಪ್ರಕಾರ ಹೀಗೆ ಮಾಡಿದರೆ ಮನೆಯೊಳಗೇ ನಕಾರತ್ಮಕತೆ ಮನೆ ಮಾಡುತ್ತದೆ. ಮನೆಯ ಸುಖ ಶಾಂತಿ ಮೇಲೆ ಪರಿಣಾಮ ಬೀರುತ್ತದೆ.
ಬಾಣಲೆಯನ್ನು ಉಲ್ಟಾ ಹಾಕಿಟ್ಟರೆ ಮನೆಯ ಸದಸ್ಯರ ನಡುವೆ ಜಗಳ ನಡೆಯುತ್ತಲೇ ಇರುವುದು. ಮನೆಯ ಸುಖ ಶಾಂತಿಗೆ ಭಂಗ ಬರುವುದು.
ವಾಸ್ತು ಪ್ರಕಾರ ಅಡುಗೆ ಮಾಡುವ ಬಲ ಭಾಗದಲ್ಲಿಯೇ ಬಾಣಲೆಯನ್ನು ಇಡಬೇಕು. ಇದೆ ಬಾಣಲೆ ಇಡುವ ಸರಿಯಾದ ನಿಯಮ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ನೀಡಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.