ನಿಮ್ಮ ದೈನಂದಿನ ಆಹಾರದಲ್ಲಿ ಕೊತ್ತಂಬರಿ ಸೊಪ್ಪಿನ ಬಳಕೆಯಿಂದ ದೃಷ್ಟಿ ಹೆಚ್ಚಿಸಬಹುದು.
ಕಿತ್ತಳೆ ರಸದಲ್ಲಿ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಬೆರೆಸಿ ಸತತ ಒಂದು ತಿಂಗಳು ಕುಡಿಯುವುದರಿಂದ ದೃಷ್ಟಿ ಸುಧಾರಿಸುತ್ತದೆ.
ತ್ರಿಫಲ ಚೂರ್ಣ ಪುಡಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಈ ನೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಇದು ದೃಷ್ಟಿ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ.
ನಿತ್ಯ 4-5 ಬಾದಾಮಿಯನ್ನು ರಾತ್ರಿ ನೆನೆಸಿತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ. ಬಳಿಕ ಒಂದು ಗ್ಲಾಸ್ ಹಾಲು ಕುಡಿಯಿರಿ. ಇದರಿಂದ ದೃಷ್ಟಿ ಸುಧಾರಿಸುತ್ತದೆ.
ಮುಕ್ಕಾಲು ಕಪ್ ಕ್ಯಾರೆಟ್ ರಸವನ್ನು ಕಾಲು ಕಪ್ ಪಾಲಕ್ ರಸದೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ದೃಸ್ತಿ ಸುಧಾರಿಸುತ್ತದೆ.
ಹಸಿ ಕ್ಯಾರೆಟ್ ಸೇವನೆಯೂ ಸಹ ದೃಷ್ಟಿ ಸುಧಾರಣೆಗೆ ಉತ್ತಮ ಕೊಡುಗೆ ನೀಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.