ಬೇಸಿಗೆ, ಮಳೆ , ಚಳಿ ಯಾವ ಕಾಲವೇ ಇರಲಿ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಅವು ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಆದರೆ ಕೆಲವು ಹಣ್ಣುಗಳನ್ನು ಸಿಪ್ಪೆ ತೆಗೆದು ತಿನ್ನಬಾರದು.
ಚಿಕ್ಕು ಆರೋಗ್ಯಕರ ಹಣ್ಣು. ಇದನ್ನು ಸಿಪ್ಪೆ ತೆಗೆದು ತಿನ್ನುವುದರಿಂದ ಇದರಲ್ಲಿರುವ ಪೋಷಕ ತತ್ವಗಳು ಸಿಪ್ಪೆ ಜೊತೆಯೇ ಹೋಗುತ್ತದೆ.
ಪೀಚ್ ಹಣ್ಣಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಇದನ್ನೂ ಸಿಪ್ಪೆ ಸಮೇತ ತಿನ್ನಬೇಕು.
ಡೆಂಗ್ಯು ಅಥವಾ ಕರೋನಾ ಸಮಯದಲ್ಲಿ ಕಿವಿ ಹಣ್ಣು ತಿನ್ನುವಂತೆ ಹೇಳಲಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಕಂಡು ಬರುತ್ತದೆ. ಆದರೆ ಇದನ್ನು ಸಿಪ್ಪೆ ಸಮೇತ ತಿನ್ನಬೇಕು.
ಪಿಯರ್ಸ್ ನ ಸಿಪ್ಪೆ ಕೂಡಾ ಫೈಬರ್ ಮತ್ತು ಇತರ ಪೋಷಕ ತತ್ವಗಳನ್ನು ಹೊಂದಿರುತ್ತದೆ.
ಸೇಬು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅನೇಕರು ಇದನ್ನೂ ಸಿಪ್ಪೆ ತೆಗೆದು ತಿನ್ನುತ್ತಾರೆ. ಹೀಗೆ ಮಾಡಿದರೆ ಪೋಷಕಾಂಶಗಳು ಸಿಪ್ಪೆಯ ಜೊತೆಯೇ ಹೋಗುತ್ತದೆ.
ಪ್ಲಮ್ ಪೋಷಕಾಂಶಗಳಲ್ಲಿ ಸಮೃದ್ದವಾಗಿರುವ ಹಣ್ಣು. ಇವುಗಳನ್ನು ಸಿಪ್ಪೆ ತೆಗೆದು ತಿನ್ನಬಾರದು.
ಮಾವಿನ ಸಿಪ್ಪೆಯಲ್ಲಿರುವ ಗುಣಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನೀವು ಕೂಡಾ ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪು ಮಾಡುತ್ತಿದ್ದರೆ ಇನ್ನು ಸರಿಪಡಿಸಿಕೊಳ್ಳಿ.