Dark Circles: ಡಾರ್ಕ್ ಸರ್ಕಲ್ ಗೆ ಕಾರಣಗಳು ಇವೇ!
ಆಯಾಸ, ಒತ್ತಡ, ನಿರ್ಜಲೀಕರಣ, ಅಪೌಷ್ಟಿಕತೆ, ಅಲರ್ಜಿಗಳು, ಸೈನಸ್ ಸಮಸ್ಯೆಗಳು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮುಂತಾದ ಹಲವು ಅಂಶಗಳಿಂದ ಡಾರ್ಕ್ ಸರ್ಕಲ್ ಬರುತ್ತದೆ.
ಒತ್ತಡವು ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ಚರ್ಮದ ಊತ ಮತ್ತು ದಪ್ಪವನ್ನು ಹೆಚ್ಚಿಸುತ್ತದೆ. ಇದಿರಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ.
ಡಾರ್ಕ್ ಸರ್ಕಲ್ ನಿರ್ಜಲೀಕರಣದಿಂದಲೂ ಬರಬಹುದು. ಸರಿಯಾದ ಪ್ರಮಾಣದ ನೀರು ದೇಹಕ್ಕೆ ಸಿಗದಿದ್ದಾಗ ಚರ್ಮವು ಮಂದ ಮತ್ತು ಗಾಢವಾಗಿ ಕಾಣುತ್ತದೆ. ಇದು ಡಾರ್ಕ್ ಸರ್ಕಲ್ ಗೆ ಕಾರಣವಾಗುತ್ತದೆ.
ಕಬ್ಬಿಣ, ವಿಟಮಿನ್ ಬಿ 12 ಮತ್ತು ಕೆ ಕೊರತೆಯು ಡಾರ್ಕ್ ಸರ್ಕಲ್ ಗಳಿಗೆ ಕಾರಣವಾಗುತ್ತದೆ.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲನಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದಲೂ ಡಾರ್ಕ್ ಸರ್ಕಲ್ ಆಗುತ್ತದೆ.
ಚರ್ಮದ ಅಲರ್ಜಿ ಮತ್ತು ಸೈನಸ್ ಸಮಸ್ಯೆಗಳು ಸಹ ಡಾರ್ಕ್ ಸರ್ಕಲ್ ಗಳಿಗೆ ಕಾರಣವಾಗಬಹುದು.
ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡಲು ಪ್ರಯತ್ನಿಸಿ. ಅಲರ್ಜಿಗಳು ಅಥವಾ ಸೈನಸ್ ಸಮಸ್ಯೆಗಳು ಇದ್ದಲ್ಲಿ, ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಿರಿ.
ದಿನಾಲೂ 3 ಲೀಟರ್ ನೀರು ಕುಡಿಯಿರಿ. ಸನ್‌ಸ್ಕ್ರೀನ್ ಬಳಸುವುದರಿಂದ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಹಾನಿಯಾಗದಂತೆ ತಡೆಯಬಹುದು.
ಡಾರ್ಕ್ ಸರ್ಕಲ್ ಅನ್ನು ಮುಚ್ಚಲು ನೀವು ಕನ್ಸೀಲರ್ ಅಥವಾ ಫೌಂಡೇಶನ್ ಅನ್ನು ಬಳಸಬಹುದು.