ಶಿವರಾತ್ರಿ ಉಪವಾಸದ ವೇಳೆ ಯಾವ ಆಹಾರ ಸೇವಿಸಬಹುದು ?

Ranjitha R K
Mar 07,2024

ಶಿವರಾತ್ರಿ ವೃತ

ಶಿವರಾತ್ರಿ ವೃತ ಆಚರಿಸುವಾಗ ಕೆಲವರು ಉಪ್ಪು ಹಾಕಿದ ಆಹಾರ ಸೇವಿಸಿದರೆ ಇನ್ನು ಕೆಲವರು ಸಿಹಿ ಪದಾರ್ಥಗಳನ್ನು ಮಾತ್ರ ಸೇವಿಸುತ್ತಾರೆ. ಶಿವರಾತ್ರಿ ದಿನ ಯಾವ ಆಹಾರವನ್ನು ಸೇವಿಸಬಹುದು ನೋಡೋಣ.

ಫಲಾಹಾರ

ಶಿವರಾತ್ರಿ ದಿನ ಫಲಾಹಾರ ಮಾಡುತ್ತೀರಿ ಎಂದಾದರೆ ಹಣ್ಣುಗಳ ಜೊತೆ ಸಬ್ಬಕ್ಕಿ ಪಾಯಸ, ಗೋಧಿ ಹಲ್ವಾ ಸೇವಿಸಬಹುದು.

ಸಬ್ಬಕ್ಕಿ ವಡಾ

ಶಿವರಾತ್ರಿ ದಿನ ಆಹಾರಕ್ಕೆ ಉಪ್ಪು ಸೇವಿಸುತ್ತೀರಿ ಎಂದಾದರೆ ಸಬ್ಬಕ್ಕಿ ವಡಾ ತಯಾರಿಸಿ ತಿನ್ನಬಹುದು.

ಸಬ್ಬಕ್ಕಿ ಕಿಚಡಿ

ಸಬ್ಬಕ್ಕಿ ಕಿಚಡಿ ಕೂಡಾ ಶಿವರಾತ್ರಿ ಸೇವಿಸಬಹುದಾದ ಆಹಾರ.

ಆಲೂಗಡ್ಡೆ

ಆಲೂಗಡ್ಡೆ ಬೇಯಿಸಿ ತಿನ್ನಬಹುದು. ಅಥವಾ ಅದರ ಜಿಲೇಬಿ ತಯಾರಿಸಿ ತಿನ್ನಬಹುದು.

ಸಿಹಿ ಗೆಣಸು

ಸಿಹಿ ಗೆಣಸು ಹೊಟ್ಟೆಯನ್ನು ತುಂಬಿಡಲು ಸಹಾಯ ಮಾಡುತ್ತದೆ. ಇದನ್ನೂ ಸೇವಿಸುವುದರಿಂದ ಸುಸ್ತು ಆಗುವುದಿಲ್ಲ.

ಹಾಲಿನ ಕೆನೆ

ಇದಲ್ಲದೆ, ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಹಾಲಿನ ಕೆನೆ, ಪೇಡಾ ಮುಂತಾದ ತಿನಿಸುಗಳನ್ನು ಸೇವಿಸಬಹುದು.


ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.

VIEW ALL

Read Next Story