ಮಹಿಳೆಯರು ತೆಂಗಿನ ಕಾಯಿ ಒಡೆಯಬಾರದು... ಏಕೆ ಗೊತ್ತಾ?
ಹಿಂದೂ ಧರ್ಮದಲ್ಲಿ ಹಲವಾರು ಆಚರಣೆಗಳಿವೆ. ಪ್ರತಿಯೊಬ್ಬರೂ ಅವುಗಳನ್ನು ಅಭ್ಯಾಸ ಮಾಡುತ್ತಾರೆ. ಆದರೆ ಇದರ ಹಿಂದಿನ ಕಾರಣ ಕೆಲವರಿಗೆ ಗೊತ್ತಿರುವುದಿಲ್ಲ.
ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎಂದು ಹೇಳಲಾಗುತ್ತದೆ. ಕೆಲವರು ಅದನ್ನು ಪಾಲಿಸುತ್ತಾರೆ.. ಆದರೆ ಹೆಂಗಸರು ತೆಂಗಿನಕಾಯಿ ಒಡೆಯಬಾರದು ಎಂಬುದರ ಹಿಂದೆ ಒಂದು ಕಾರಣವಿದೆ.
ತೆಂಗಿನಕಾಯಿಯನ್ನು ಪೂರ್ಣಫಲ ಎಂದು ಕರೆಯಲಾಗುತ್ತದೆ. ದೇವರ ಆರಾಧನೆಯಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಮಹತ್ವವಿದೆ.
ದೇವರ ಮುಂದೆ ತೆಂಗಿನಕಾಯಿಯನ್ನು ಒಡೆದು ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಪ್ರತಿ ಪೂಜೆಯಲ್ಲಿಯೂ ತೆಂಗಿನಕಾಯಿ ಒಡೆಯಲೇ ಬೇಕು.
ಮಹಿಳೆಯರು ತೆಂಗಿನಕಾಯಿ ಒಡೆದರೆ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬುದು ನಂಬಿಕೆ. ಹುಟ್ಟುವ ಮಗುವಿಗೆ ಸಮಸ್ಯೆಗಳಾಗಬಹುದು ಎಂದು ನಂಬಲಾಗಿದೆ.
ಅದಕ್ಕಾಗಿಯೇ ಮಹಿಳೆಯರುತೆಂಗಿನಕಾಯಿ ಒಡೆಯುವುದನ್ನು ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದೆ.
ಪುರಾಣಗಳ ಪ್ರಕಾರ, ವಿಷ್ಣು ಮತ್ತು ಲಕ್ಷ್ಮಿ ದೇವಿಯು ಭೂಮಿಯ ಮೇಲೆ ತೆಂಗಿನ ಮರವನ್ನು ನೆಟ್ಟರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ತೆಂಗಿನಕಾಯಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.
ತೆಂಗಿನಕಾಯಿಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಇದ್ದಾರೆ ಎಂಬುದು ನಂಬಿಕೆ. ಇದಕ್ಕಾಗಿಯೇ ತೆಂಗಿನಕಾಯಿಗೆ ಮೂರು ಕಣ್ಣುಗಳಿರುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.