ಯೋಗದಿಂದ ಬದುಕಿನಲ್ಲಿ ಆರೋಗ್ಯ,ಆಯಸ್ಸು,ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಪದ್ಮಾಸನ

ಅಡ್ಡ ಕಾಲಿನಲ್ಲಿ ಧ್ಯಾನದ ರೀತಿಯಲ್ಲಿ ಕುಳಿತುಕೊಳ್ಳುವುದೇ ಪದ್ಮಾಸನ,ಈ ಆಸದಿಂದ ಜೀರ್ಣಕ್ರಿಯೆಗೆ ಸಹಾಯವಾಗತ್ತದೆ.

ತ್ರಿಕೋನ

ಸೊಂಟ ಹಾಗೂ ಬೆನ್ನುಮೂಳೆಯ ಆರೋಗ್ಯವನ್ನು ರಕ್ಷಿಸುವುದಲ್ಲದೇ,ಉಸಿರಾಟದ ಕ್ರಿಯೆಯನ್ನು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.

ಶವಾಸನ

ದೇಹಕ್ಕೆ ಆಯಾಸವಾಗಿದ್ದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಈ ಆಸನ ಉತ್ತಮ ಪರಿಹಾರವಾಗಿದ್ದೂ,ಹೃದಯದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ಧನುರಾಸನ

ದೇಹದ ಉಷ್ಣತೆಯನ್ನು ಕಡಿಮೆಗೊಳಿಸಿ ತಂಪಾಗಿರುವುರುವಂತೆ ನೋಡಿಕೊಳ್ಳುತ್ತದೆ.ಸದಾ ಆತ್ಮ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಈ ಆಸನ ಉತ್ತಮವಾಗಿರುತ್ತದೆ.

ವೃಕ್ಷಾಸನ

ಯಾವಾಗಲೂ ಕಂಪ್ಯೂಟರ್ ,ಮೊಬೈಲ್ ನೋಡುತ್ತಿರುವುದರಿಂದ ಕಣ್ಣುಗಳಿಗೆ ಒತ್ತಡ ಅನಿಸುತ್ತಿದ್ದರೆ ಒಮ್ಮೆ ಈ ಆಸನದಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ದಂಡಾಸನ

ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನು ನೋವು ಹೆಚ್ಚಾದರೆ ದಂಡಾಸನದಿಂದ ಮುಕ್ತಿ ಪಡೆಯಬಹುದು.ಯಾವಾಗಲೂ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

ಭುಜಂಗಾಸನ

ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕಾದರೆ ಭುಜಂಗಾಸನವು ಉತ್ತಮವಾದ ಯೋಗಾಭ್ಯಾಸವಾಗಿದೆ.ಇದು ದೇಹದಲ್ಲಿ ಅನಾವಶ್ಯಕ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

ತಾಡಾಸನ

ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುವುದಲ್ಲದೇ,ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

VIEW ALL

Read Next Story