ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು. 72 ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುವ ಅಜ್ಜಿ ಕಳೆದ ಏಳು ವರ್ಷಗಳಿಂದ ಯೋಗ ಮೊರೆ ಹೋಗಿದ್ದು, ತನ್ನ ಆರೋಗ್ಯ ರಕ್ಷಣೆಗಾಗಿ ಯೋಗಾ ಕಡೆ ವಾಲಿರುವುದಾಗಿ ಹೇಳುತ್ತಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ದ್ರಾಕ್ಷಾಯಿಣಿ ವಡಗೇರಿ ಇಳಿವಯಸ್ಸಿನ ಯೋಗ ಸಾಧಕಿ ಆಗಿದ್ದು, ನಿತ್ಯ ಬೆಳಗ್ಗೆ 5.30 ಕ್ಕೆ ವಾಕಿಂಗ್ ಹೋಗುವ ಅಜ್ಜಿ... ವಾಕಿಂಗ್ ಜೊತೆ ರಸ್ತೆ ಬದಿಯಲ್ಲೆ ಯೋಗಾಭ್ಯಾಸ ಮಾಡ್ತಾರಂತೆ.

ಲೋ ಬಿಪಿ ಹಾಗೂ ದಮ್ಮಿನಿಂದ (ತೇಕುವುದು) ಬಳಲುತ್ತಿದ್ದ ದ್ರಾಕ್ಷಾಯಿಣಿ ಅಜ್ಜಿ ಆಸ್ಪತ್ರೆಗೆ ಖರ್ಚು ಮಾಡು ಶಕ್ತಿ ಇಲ್ಲದೇ ನಿತ್ಯ ವಾಕಿಂಗ್ ಗೆ ಮೊರೆ ಹೋಗಿದ್ದರಂತೆ, ಬಳಿಕ ಯೋಗವನ್ನೂ ಆರಂಭಿಸಿದ್ದಾರೆ.

ಸ್ವಯಂ ಆಗಿ ಯೋಗದ ವಿವಿಧ ಆಸನ ರೂಢಿಸಿಕೊಂಡಿರುವ ಅಜ್ಜಿ ಯೋಗ ಮಾಡಲು ಆರಂಭಿಸಿದ ಬಳಿಕ ಈಗ ಆರೋಗ್ಯ ಸಂಪೂರ್ಣ ಸುಧಾರಣೆ ಆಗಿದೆ ಅಂತಾರೆ.

ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ ಅಂತಾರೆ. ಯೋಗ ಆರಂಭ ಮಾಡಿದಾಗಿಂದ ಯಾವುದೇ ಕಾಯಿಲೆ ಇಲ್ಲದೇ ಆರೋಗ್ಯವಾಗಿದ್ದೇನೆ.

ಬೆಳಗ್ಗೆ ವಾಕಿಂಗ್, ಯೋಗಾಭ್ಯಾಸದ ಬಳಿಕ ರಸ್ತೆ ಬದಿಯಲ್ಲಿ ಸಿಗುವ ಕಟ್ಟಿಗೆ ಆಯ್ದುಕೊಂಡು (ಅಡುಗೆ ಮಾಡಲು) ಹೋಗುವುದು ಅಭ್ಯಾಸವಾಗಿದೆ ಎಂದವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

72ನೇ ವಯಸ್ಸಿನಲ್ಲಿ ಅಜ್ಜಿ ಮಾಡುವ ಯೋಗದ ಆಸನಗಳು ಅಚ್ಚರಿ ಮೂಡಿಸುತ್ತೆ....

ಯೋಗದಿಂದ ರೋಗ ದೂರ ಮಾಡಿಕೊಂಡ ವೃದ್ದೆ ಎಲ್ಲರಿಗೂ ಮಾದರಿ ಆಗಿದ್ದಾರೆ.

VIEW ALL

Read Next Story