)
Weight loss tips : ತೂಕ ಇಳಿಸಿಕೊಳ್ಳುವುದು ಹಲವರಿಗೆ ದೊಡ್ಡ ಸವಾಲಾಗಿದೆ. ಇಂದಿನ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಬೊಜ್ಜು ಸಮಸ್ಯೆ (Body Weight) ಹೆಚ್ಚುತ್ತಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ಆಹಾರಕ್ರಮ ಮತ್ತು ವ್ಯಾಯಾಮಗಳನ್ನು ಪ್ರಯತ್ನಿಸುತ್ತಾರೆ. ಆದರೂ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತಿಲ್ಲ.
ಇದಕ್ಕೆ ಹಲವಾರು ಕಾರಣಗಳಿವೆ.. ಅವುಗಳಲ್ಲಿ ಸರಿಯಾದ ಆಹಾರವನ್ನು ಸೇವಿಸದಿರುವುದು, ವ್ಯಾಯಾಮವನ್ನು ಸರಿಯಾಗಿ ಮಾಡದಿರುವುದು ಮತ್ತು ಕೆಟ್ಟ ಅಭ್ಯಾಸಗಳು ಸೇರಿವೆ. ಕೆಲವರು ಬೇಗನೆ ತೂಕ ಇಳಿಸಿಕೊಳ್ಳುತ್ತಾರೆ. ಈ ಪೈಕಿ, ಮಹಿಳೆಯೊಬ್ಬರು 3 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿರುವುದಾಗಿ Instagram ನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫಿಟ್ನೆಸ್ ಪ್ರಯಾಣ ಹಂಚಿಕೊಳ್ಳುವ ಮೂಲಕ ರೀತ್ ಕೌರ್ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ರೀತ್ 12 ವಾರಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾದರು. ಇದೀಗ ತಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಹೇಗೆ ತೂಕ ಇಳಿಸಿಕೊಂಡರು ಅಂತ ವಿವರಿಸಿದ್ದಾರೆ.
3 ತಿಂಗಳಲ್ಲಿ 18 ಕೆಜಿ ತೂಕ ಇಳಿಕೆ : ತೂಕ ಇಳಿಸಿಕೊಳ್ಳಲು ದಾರಿಗಳನ್ನು ಹುಡುಕುತ್ತಿರುವವರಿಗೆ ರೀತ್ ಕೌರ್ ಮಾದರಿಯಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫಿಟ್ನೆಸ್ ಸಲಹೆಗಳನ್ನು ಹಂಚಿಕೊಳ್ಳುವ ರೀತ್, ಕೇವಲ ಒಂದು ಅಭ್ಯಾಸದಿಂದ 12 ವಾರಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಿದ್ದಾರೆ. ಪೋಸ್ಟ್ನಲ್ಲಿ, "ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಕ್ಯಾಲೋರಿ ಕೊರತೆಯತ್ತ ಗಮನಹರಿಸಬೇಕು" ಎಂದು ಸಲಹೆ ನೀಡಿದ್ದಾರೆ.
ರೀತ್ ಶಿಫಾರಸು ಮಾಡಿದ ಆಹಾರಕ್ರಮ : ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳ ಬದಲಿಗೆ, ನೀವು ಹಣ್ಣುಗಳು, ತರಕಾರಿಗಳು ಮತ್ತು ಸೂಪ್ಗಳಂತಹ ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಆರಿಸಿಕೊಳ್ಳಬೇಕು. ತೂಕ ನಷ್ಟಕ್ಕೆ ತಾವು ಹೇಗೆ ತಮ್ಮ ಆಹಾರಕ್ರಮದಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಅಳವಡಿಸಿಕೊಂಡರು ಅಂತ ವಿವರಿಸಿದ್ದಾರೆ.
ಫೈಬರ್ ಭರಿತ ಆಹಾರಗಳು : ನೀವು ದ್ವಿದಳ ಧಾನ್ಯಗಳು, ಸಣ್ಣ ಧಾನ್ಯಗಳು ಇತ್ಯಾದಿಗಳನ್ನು ಸೇವಿಸಬೇಕು. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಅವು ನಿಮ್ಮ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತವೆ ಎಂದು ವಿಡಿಯೋದಲ್ಲಿ ರೀತ್ ಹೇಳಿಕೊಂಡಿದ್ದಾರೆ.
ಕಡಿಮೆ ಕ್ಯಾಲೋರಿ ಆಹಾರಗಳು : ನೀವು ಗ್ರೀನ್ಸ್, ಸಲಾಡ್ ಇತ್ಯಾದಿಗಳನ್ನು ಸೇವಿಸಬಹುದು. ಇವು ಹೊಟ್ಟೆಯನ್ನು ತುಂಬಲು ಮತ್ತು ಕ್ಯಾಲೋರಿ ಕೊರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರೀತ್ ತಿಳಿಸಿದ್ದಾರೆ. ಅಲ್ಲದೆ, ಈ ಆಹಾರ ಪದ್ಧತಿಯ ಬದಲಾವಣೆಗಳ ಮೂಲಕ, ತಮ್ಮ ದೇಹದ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ, ನೀವು ಸಹ ರೀತ್ನಂತೆ ಅದ್ಭುತ ಫಲಿತಾಂಶಗಳನ್ನು ಸಾಧಿಸಬಹುದು.