)
Hotwifeing Trend: ಮದುವೆ ಮತ್ತು ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡುವ ಭಾರತದಲ್ಲಿ ಗಂಡನಾಗಲಿ ಅಥವಾ ಹೆಂಡತಿಯಾಗಲಿ ಬೇರೆಯವರೊಂದಿಗೆ ಸಂಬಂಧ ಹೊಂದುವುದು ನೈತಿಕವಾಗಿ ಸಮಂಜಸವಲ್ಲ ಎನ್ನಲಾಗುತ್ತದೆ. ಆದರೆ ದೇಶದಲ್ಲಿ ಇದೀಗ ಹಾಟ್ವೈಫಿಂಗ್ ಪ್ರವೃತ್ತಿ ಸಖತ್ ಟ್ರೆಂಡ್ ಆಗುತ್ತಿದೆ. ಫ್ಯಾಷನ್ ಆಗಿ ಬೆಳೆಯುತ್ತಿರುವ ಈ ಹಾಟ್ವೈಫಿಂಗ್ ಪ್ರವೃತ್ತಿ ದಂಪತಿಯ ನಡುವೆ ಪರಸ್ಪರ ಒಪ್ಪಿಗೆ ಮೇರೆಗೆ ನಡೆಯುವ ಹೊಸ ಪ್ರವೃತ್ತಿಯಾಗಿದೆ. ಹಾಟ್ವೈಫಿಂಗ್ ಸಂಸ್ಕೃತಿ ಎಷ್ಟು ಸರಿ ಅನ್ನೋದರ ಬಗ್ಗೆ ತಜ್ಞರು ಸಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಹಾಟ್ವೈಫಿಂಗ್ ಸಂಸ್ಕೃತಿಯನ್ನ ಇದೀಗ ಹೆಚ್ಚಿನ ದಂಪತಿ ಅನುಸರಿಸುತ್ತಿದ್ದಾರೆ. ಇದು ಸರಿಯೋ ಅಥವಾ ತಪ್ಪೋ ಅನ್ನೋದರ ಬಗ್ಗೆ ಅವರೇ ನಿರ್ಧರಿಸಬೇಕಿದೆ. ಏಕಪತ್ನಿತ್ವ ಪದ್ಧತಿ ಆಚರಣೆ ಮಾಡದ ವ್ಯಕ್ತಿಗಳೇ ಈ ಹಾಟ್ವೈಫಿಂಗ್ ಸಂಸ್ಕೃತಿಯ ಹಿಂದೆ ಬಿದ್ದಿದ್ದಾರೆ. ಇದರರ್ಥ ಪತಿ ಅಥವಾ ಪತ್ನಿ ತನ್ನ ಸಂಗಾತಿಯ ಒಪ್ಪಿಗೆಯ ಮೇರೆಗೆ ಬೇರೆಯವರೊಂದಿಗೆ ಸಂಬಂಧ ಹೊಂದುವುದು. ಲೈಂಗಿಕ ಉದ್ದೇಶಕ್ಕಾಗಿ ಮಾತ್ರ ಈ ಸಂಸ್ಕೃತಿ ಆಚರಣೆಯಲ್ಲಿದೆ. ಕೆಲವರು ಈ ಟ್ರೆಂಡ್ ಪಾಲಿಸುವ ಮೂಲಕ ದೀರ್ಘಕಾಲದವರೆಗೆ ಸಂಬಂಧವನ್ನ ಮುಂದುವರೆಸಿಕೊಂಡು ಹೋಗುತ್ತಿರುತ್ತಾರಂತೆ. ಇದರ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದು, ಭಾರತದಂತಹ ದೇಶದಲ್ಲಿ ಈ ಸಂಸ್ಕೃತಿ ಟ್ರೆಂಡ್ ಆಗುತ್ತಿರುವುದು ಅರ್ಥಹೀನವೆಂದು ಹೇಳಿದ್ದಾರೆ.
ಹಾಟ್ವೈಫಿಂಗ್ ಎಂದರೇನು?
ಹಾಟ್ವೈಫಿಂಗ್ ಎನ್ನುವುದು ಒಂದು ರೀತಿಯ ಒಮ್ಮತದ ಸಂಬಂಧ. ಹಾಟ್ವೈಫ್ ಎಂದು ಕರೆಯಲ್ಪಡುವ ವಿವಾಹಿತ ಮಹಿಳೆ ತನ್ನ ಪತಿಯನ್ನ ಹೊರತುಪಡಿಸಿ ಇತರ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದಿರುತ್ತಾಳೆ. ಈ ಬಗ್ಗೆ ಆಕೆಯ ಪತಿಗೂ ತಿಳಿದಿರುತ್ತದೆ. ಇದರಲ್ಲಿ ಆಕೆ ಪತಿ ಸಹ ಭಾಗಿಯಾಗಿರುತ್ತಾನೆ. ಈಗಾಗಲೇ ವಿದೇಶದಲ್ಲಿ ಈ ಸಂಸ್ಕೃತಿ ಜಾರಿಯಲ್ಲಿದೆ. ಈ ವಿದೇಶ ಸಂಸ್ಕೃತಿ ಇದೀಗ ಭಾರತದ ಮೆಟ್ರೋ ನಗರಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಭಾರದಲ್ಲಿ ಮದುವೆ, ಸಂಬಂಧ, ಪತಿ-ಪತ್ನಿ ನಡುವಿನ ಅನ್ಯೋನ್ಯತೆ ವಿಶೇಷ ಮಹತ್ವವಿದೆ. ಆದರೆ ಈ ಹಾಟ್ವೈಫಿಂಗ್ ಸಂಸ್ಕೃತಿ ಭಾರತೀಯ ದಂಪತಿಗಳ ಜೀವನದಲ್ಲಿ ಬಿರುಗಾಳಿ ಸೃಷ್ಟಿಸುತ್ತಿದೆ. ಏಕೆಂದರೆ ಗಂಡ-ಹೆಂಡತಿ ತಮ್ಮ ಸಂಗಾತಿಯೇ ಸರ್ವಸ್ವವೆಂದು ಬದುಕುತ್ತಿರುವಾಗ ಈ ಕೆಟ್ಟ ಸಂಸ್ಕೃತಿಯಿಂದ ಸಂಬಂಧಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಈಗಾಗಲೇ ಭಾರತದಲ್ಲಿ ಅನೇಕ ರೀತಿಯ ಕೆಟ್ಟ ಸಂಸ್ಕೃತಿಗಳು ಟ್ರೆಂಡಿಂಗ್ ಆಗುತ್ತಿವೆ. ಅದೇ ರೀತಿ ಹಾಟ್ವೈಫಿಂಗ್ ಕೂಡ ಸದ್ಯ ಸಖತ್ ಸೌಂಡ್ ಮಾಡುತ್ತಿದೆ.
ತಜ್ಞರು ಹೇಳೋದೇನು?
ಮನೋಚಿಕಿತ್ಸಕರು ಮತ್ತು ತಜ್ಞರು ಹೇಳುವ ಪ್ರಕಾರ, ಹಾಟ್ವೈಫಿಂಗ್ನಲ್ಲಿ ಪತಿಯು ತನ್ನ ಪತ್ನಿಯನ್ನ ದೈಹಿಕವಾಗಿ ತೃಪ್ತಿಪಡಿಸಲು ಹಾಗೂ ಇದರ ಬಗ್ಗೆ ಕಲಿಯಲು ಅಥವಾ ಅನುಭವ ಪಡೆಯಲು ಈ ರೀತಿ ಭಾಗವಹಿಸಲು ತನ್ನ ಪತ್ನಿಗೆ ಪ್ರಚೋದನೆ ನೀಡುತ್ತಾನೆ. ಪರಸ್ಪರ ಒಪ್ಪಿಗೆ ಮತ್ತು ನಂಬಿಕೆ ಇದ್ದಾಗ ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ. ಹಾಟ್ವೈಫಿಂಗ್ ಸಂಬಂಧಕ್ಕೆ ಉತ್ಸಾಹ, ನಂಬಿಕೆ ಮತ್ತು ಲೈಂಗಿಕ ಉದ್ವೇಗದ ಅಂಶಗಳು ಮುಖ್ಯವಾಗುತ್ತವೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಅವರವರ ಭಾವಕ್ಕೆ ಬಿಟ್ಟ ವಿಚಾರ. ಹೇಳುವವರು ಕೇಳುವವರು ಯಾರೂ ಇಲ್ಲದಾದಾಗ ಈ ರೀತಿಯ ಸಂಸ್ಕೃತಿಗಳು ಹುಟ್ಟಿಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ