)
whight hair problem in early age: ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ವಯಸ್ಕರು ಮಾತ್ರವಲ್ಲದೆ ಮಕ್ಕಳೂ ಸಹ ಎದುರಿಸುತ್ತಿದ್ದಾರೆ. ಬಿಳಿ ಕೂದಲು ಬರಲು ಹಲವು ಕಾರಣಗಳಿವೆ. ಹಾಗಾದರೆ ಬಿಳಿ ಕೂದಲು ನಿಜವಾಗಿಯೂ ಏಕೆ ಬರುತ್ತದೆ ಮತ್ತು ಅದಕ್ಕೆ ಪರಿಹಾರವೇನೆಂಬುವುದನ್ನು ತಿಳಿದುಕೊಳ್ಳೊಣ ಬನ್ನಿ..
ಬಿಳಿ ಕೂದಲು ಹೆಚ್ಚಾಗಲು ಪ್ರಮುಖ ಕಾರಣಗಳು
ಕೂದಲಿನ ಬಣ್ಣವು ನಮ್ಮ ದೇಹವು ಎಷ್ಟು ಆರೋಗ್ಯವಾಗಿದೆ ಅನ್ನುವುದರ ಆಧಾರದ ಮೇಲೆ ನಮ್ಮ ಕೂದಲು ಕಪ್ಪಾಗಿರುತ್ತವೆ. ನಮ್ಮ ದೇಹದಲ್ಲಿ ಮೆಲನಿನ್ ಎಂಬ ರಾಸಾಯನಿಕ ಮುಖ್ಯ ಪಾತ್ರವಹಿಸುತ್ತದೆ. ಆದರೆ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ಮೆಲನಿನ್ ಉತ್ಪಾದನೆ ಕಡಿಮೆಯಾಗುತ್ತದೆ. ವಿಶೇಷವಾಗಿ ವಿಟಮಿನ್ ಬಿ12 ಕೊರತೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ವಿಟಮಿನ್ ಬಿ12 ಕೆಂಪು ರಕ್ತಕಣಗಳ ಆರೋಗ್ಯಕ್ಕೂ ಹಾಗೂ ನರಮಂಡಲದ ಸರಿಯಾದ ಕಾರ್ಯವೈಖರಿಗೂ ಅಗತ್ಯವಾಗಿದೆ. ಇದರ ಕೊರತೆಯಿಂದ ಕೂದಲಿನ ಬಣ್ಣ ನಿಧಾನವಾಗಿ ಬಿಳಿಯಾಗತೊಡಗುತ್ತದೆ.
ವಿಟಮಿನ್ ಬಿ12 ಇರುವ ಆಹಾರಗಳನ್ನು ಸೇವಿಸುವುದರಿಂದ ಸಮಸ್ಯೆ ಪರಿಹಾರ
ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದೆ ಎಂದು ಅನುಮಾನವಿದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯುತ್ತಮ. ವೈದ್ಯರ ಸಲಹೆಯಂತೆ ಪೂರಕಗಳನ್ನು ತೆಗೆದುಕೊಳ್ಳಬಹುದು. ಜೊತೆಗೆ, ದೈನಂದಿನ ಆಹಾರದಲ್ಲಿ ನೈಸರ್ಗಿಕ ವಿಟಮಿನ್ ಬಿ12 ಇರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು.
ಮೊಟ್ಟೆ
ಹಾಲು ಮತ್ತು ಹಾಲು ಉತ್ಪನ್ನಗಳು
ಮೀನು
ಮಾಂಸ
ಮಶ್ರೂಮ್
ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತದೆ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.
ಬಿಳಿ ಕೂದಲ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು
ಬಿಳಿ ಕೂದಲನ್ನು ಮರೆಮಾಚಲು ಬಹಳಷ್ಟು ಜನರು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಆದರೆ ಇವುಗಳು ಹಾನಿಕಾರಕ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಆದ್ದರಿಂದ ಬದಲಿಗೆ ಮೆಹೆಂದಿ(ಹೆನ್ನಾ), ಆಮ್ಲಾ, ಮೆಂತ್ಯ, ಕರಿಬೇವು ಎಲೆಗಳು ಮುಂತಾದ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸುವುದರಿಂದ ಕೂದಲು ಕಪ್ಪಾಗುವುದರೊಂದಿಗೆ, ಆರೋಗ್ಯವನ್ನೂ ಸಹ ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲಾ ಈ ಮನೆಮದ್ದುಗಳು ನೆತ್ತಿಯನ್ನು ತಂಪಾಗಿರಿಸುವುದರೊಂದಿಗೆ ದೇಹಕ್ಕೂ ಒಳ್ಳೆಯದು.
ಆಹಾರ ಮತ್ತು ಜೀವನಶೈಲಿ
ಕೂದಲಿನ ಆರೋಗ್ಯಕ್ಕಾಗಿ ಪೂರಕ ಆಹಾರ ಮಾತ್ರವಲ್ಲದೆ ಜೀವನಶೈಲಿಯೂ ಅತಿ ಮುಖ್ಯ.
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು
ಒತ್ತಡವನ್ನು ನಿಯಂತ್ರಿಸುವುದು
ಹಸಿರು ತರಕಾರಿ, ಹಣ್ಣುಗಳು, ಪ್ರೋಟೀನ್ ಭರಿತ ಆಹಾರ ಸೇವಿಸುವುದು
ಇವುಗಳನ್ನೆಲ್ಲ ಪಾಲಿಸಿದರೆ ಕೂದಲು ಬಲಿಷ್ಠವಾಗುತ್ತವೆ ಮತ್ತು ನೈಸರ್ಗಿಕ ಬಣ್ಣ ಕಾಪಾಡಲು ಸಹಾಯಕವಾಗುತ್ತದೆ. ಒತ್ತಡ, ನಿದ್ರೆ ಕೊರತೆ ಮತ್ತು ಅಸಮತೋಲಿತ ಆಹಾರ ಪದ್ಧತಿಯು ಬಿಳಿ ಕೂದಲನ್ನು ವೇಗವಾಗಿ ಹೆಚ್ಚಿಸುತ್ತದೆ. ಇನ್ನು ಬಿಳಿ ಕೂದಲ ಸಮಸ್ಯೆ ಕಡಿಮೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸರಿಯಾದ ಆರೈಕೆಯಿಂದ ಮಾತ್ರ ಇದು ಸಾದ್ಯವಾಗುತ್ತದೆ. ಸಮತೋಲಿತ ಆಹಾರ, ನೈಸರ್ಗಿಕ ಗಿಡಮೂಲಿಕೆಗಳ ಬಳಕೆ ಮತ್ತು ಒತ್ತಡಮುಕ್ತ ಜೀವನ ಶೈಲಿ ನಿಮ್ಮ ಕೂದಲನ್ನು ಹೆಚ್ಚು ದಿನಗಳು ಕಪ್ಪಾಗಿಡಲು ಸಹಕರಿಸುತ್ತದೆ.