)
Death rites : ಒಬ್ಬ ವ್ಯಕ್ತಿ ಸತ್ತ ಮೇಲೆ ಅವರ ಕಾಲಿನ ಹೆಬ್ಬೆರಳುಗಳನ್ನು ಬಿಳಿ ದಾರದಿಂದ ಅಥವಾ ಸಣ್ಣ ಬಟ್ಟೆಯಿಂದ ಕಟ್ಟಿರುವುದನ್ನು ನಾವು ಎಲ್ಲರೂ ನೋಡಿದ್ದೇವೆ. ಆದರೆ, ಇದನ್ನು ಯಾಕೆ ಮಾಡುತ್ತಾರೆ? ಕೇವಲ ಪದ್ಧತಿ ಅಂದ್ರೆ ತಪ್ಪು! ಇದರ ಹಿಂದೆ ಆಧ್ಯಾತ್ಮಿಕ ಅರ್ಥವೂ ಇದೆ, ಜೊತೆಗೆ ವೈಜ್ಞಾನಿಕ ಕಾರಣವೂ ಇದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಮರಣದ ನಂತರ ಆತ್ಮ ದೇಹವನ್ನು ಬಿಟ್ಟು ಹೊರಬಂದರೂ ಕೂಡ, ಅದು ಮತ್ತೆ ದೇಹವನ್ನು ಪ್ರವೇಶಿಸಲು ಪ್ರಯತ್ನಿಸುತ್ತದೆ. ದೇಹದ ಮೂಲಾಧಾರ ಚಕ್ರವೇ ಜೀವಶಕ್ತಿಯ ದ್ವಾರ. ಆದ್ದರಿಂದ ಹೆಬ್ಬೆರಳುಗಳನ್ನು ಕಟ್ಟುವುದರಿಂದ ಆ ದ್ವಾರವನ್ನು ಮುಚ್ಚಲಾಗುತ್ತದೆ. ಇದರಿಂದ ಆತ್ಮ ಹಿಂದಿರುಗದೇ ಮುಂದಿನ ಲೋಕದತ್ತ ಸಾಗುತ್ತದೆ ಎಂದು ನಂಬಿಕೆ ಇದೆ. ಇದರಿಂದ ಆತ್ಮಕ್ಕೆ ದಾರಿ ಸ್ಪಷ್ಟವಾಗುತ್ತದೆ ಎನ್ನಲಾಗುತ್ತದೆ.
ಇದು ಕೇವಲ ಆತ್ಮಕ್ಕಷ್ಟೇ ಅಲ್ಲ, ಇದೊಂದು ಭಾವನಾತ್ಮಕ ಸಂಬಂಧವನ್ನೂ ಸಹ ಹೊಂದಿದೆ. ಈ ರೀತಿ ಮಾಡುವುದರ ಅರ್ಥ ಅವರ ಭೌತಿಕ ಬದುಕು ಮುಗಿದಿದೆ, ಇಹಲೋಕದ ಬಂಧನಗಳೆಲ್ಲ ಕಡಿದುಹೋಗಿವೆ ಎಂದು ಸೂಚಿಸುತ್ತದೆ. ಕುಟುಂಬ ಸದಸ್ಯರ ಮನಸ್ಸಿಗೆ ಶಾಂತಿ ಸತ್ಯವನ್ನು ಅರಿತುಕೊಳ್ಳುವ ಸಂಕೇತವನ್ನು ಇದು ತೋರಿಸುತ್ತದೆ.
ವೈಜ್ಞಾನಿಕ ಕಾರಣ
ಮನುಷ್ಯ ಸತ್ತ ನಂತರ ದೇಹ ಕ್ರಮೇಣ ಗಟ್ಟಿಯಾಗುತ್ತಾ ಹೋಗುತ್ತದೆ ಇದನ್ನು ರಿಗೋರ್ ಮಾರ್ಟಿಸ್ ಎನ್ನುತ್ತಾರೆ. ಆ ಸಮಯದಲ್ಲಿ ಕಾಲುಗಳನ್ನು ಕಟ್ಟಿಟ್ಟುಕೊಳ್ಳುವುದರಿಂದ ದೇಹ ಸರಿಯಾಗಿ ನೇರವಾಗಿ ಇರುತ್ತದೆ. ಅಂತ್ಯಕ್ರಿಯೆ ವೇಳೆ ಇದರಿಂದ ತೊಂದರೆ ಆಗುವುದಿಲ್ಲ. ಇಷ್ಟೆಲ್ಲಾ ಕಾರಣಗಳು ಇದರ ಹಿಂದಿದೆ.