Winter Skin Care: ಚಳಿಗಾಲದಲ್ಲಿ ಕಾಂತಿಯುತ ತ್ವಚೆ ಪಡೆಯಲು `ಸೋಪ್` ಬದಲಿಗೆ ಇವುಗಳನ್ನು ಬಳಸಿ
Winter Skin Care: ಚಳಿಗಾಲದಲ್ಲಿ ತ್ವಚೆ ಒಡೆಯುವಿಕೆ, ಶುಷ್ಕತೆಯಿಂದ ರಕ್ಷಿಸಿ, ಕಾಂತಿಯುತ ಚರ್ಮವನ್ನು ಪಡೆಯಲು ಕೆಲವು ನೈಸರ್ಗಿಕ ವಸ್ತುಗಳು ತುಂಬಾ ಲಾಭದಾಯಕವಾಗಿವೆ.
Winter Skin Care: ಚಳಿಗಾಲದಲ್ಲಿ ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಆದರೆ ತಂಪಾದ ಗಾಳಿಯು ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಅದರಲ್ಲೂ ಚರ್ಮದ ಶುಷ್ಕತೆಯ ಸಮಸ್ಯೆ ಜನರನ್ನು ಹೆಚ್ಚು ಬಾಧಿಸುತ್ತದೆ. ಇದಕ್ಕಾಗಿ ಸ್ವೆಟರ್, ಟೋಪಿ, ಸಾಕ್ಸ್ ಧರಿಸುವ ಮೂಲಕ ಕೈ, ಕಾಲುಗಳನ್ನು ತಣ್ಣನೆಯ ಗಾಳಿಯಿಂದ ರಕ್ಷಿಸಬಹುದು. ಆದರೆ, ಮುಖವನ್ನು ಶೀತ ಗಾಳಿಯಿಂದ ರಕ್ಷಿಸುವುದು ಕಷ್ಟಸಾಧ್ಯ.
ಶೀತ ಗಾಳಿಯಿಂದಾಗಿ ಮುಖದ ಅಂದ ಕಳೆಗುಂದುತ್ತದೆ. ಮಂದ ತ್ವಚೆಯ ಮೇಲೆ ಸೋಪ್ ಬಳಕೆ ಚರ್ಮವನ್ನು ಇನ್ನೂ ಹಾನಿಗೊಳಿಸುತ್ತದೆ. ಆದರೆ, ಚಳಿಗಾಲದಲ್ಲಿ 'ಸೋಪ್' ಬದಲಿಗೆ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಕಾಂತಿಯುತ ಸುಂದರ ತ್ವಚೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಹಸಿ ಹಾಲು:
ಹಸಿ ಹಾಲು ಅಥವಾ ಹಾಲಿನ ಕೆನೆ ಬಳಸಿ ನಿಯಮಿತವಾಗಿ ಮಸಾಜ್ ಮಾಡಿ. ಲಘುವಾಗಿ ಮಸಾಜ್ ಮಾಡಿ, ಕೆಲ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚಳಿಗಾಲದಲ್ಲಿ ಚರ್ಮಕ್ಕೆ ಮರುಜೀವ ದೊರೆಯುತ್ತದೆ.
ಇದನ್ನೂ ಓದಿ- ಮೆಹಂದಿಯಲ್ಲಿ ಈ ಎಲೆ ಪುಡಿ ಬೆರೆಸಿ ಬಳಸಿದರೆ ನೈಸರ್ಗಿಕವಾಗಿ ಕಡು ಕಪ್ಪಾಗುತ್ತೆ ಬಿಳಿ ಕೂದಲು!
ಕಡ್ಲೆ ಹಿಟ್ಟು ಮೊಸರು:
ಕಡಲೆ ಹಿಟ್ಟಿನಲ್ಲಿ ಮೊಸರನ್ನು ಬೆರೆಸಿ ಇದರಿಂದ ಫೇಸ್ ವಾಶ್ ಮಾಡಿ. ಇದು ಚರ್ಮವು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.
ಓಟ್ಸ್ ಮತ್ತು ಹಾಲು:
ಹಾಲಿನಲ್ಲಿ ಓಟ್ಸ್ ಬೆರೆಸಿಟ್ಟು ಇದರಿಂದ 5 ನಿಮಿಷಗಳ ಕಾಲ ಫೇಸ್ ಮಸಾಜ್ ಮಾಡಿ. ಇದು ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಕಾಂತಿಯುತವಾಗಿಸುತ್ತದೆ.
ಅಲೋವೇರಾ:
ರಾತ್ರಿ ಮಲಗುವ ಮೊದಲು ತಾಜಾ ಅಲೋವೇರಾ ಜೆಲ್ ಅನ್ನು ಮುಖಕ್ಕೆ ಅನ್ವಯಿಸಿ ಬೆಳಗೆದ್ದು ಮುಖ ತೊಳೆಯಿರಿ. ಇದು ಚರ್ಮವನ್ನು ಹೈಡ್ರೇಟ್ ಆಗಿರಿಸಾಲು ಸಹಕಾರಿ ಆಗಿದೆ.
ಇದನ್ನೂ ಓದಿ- ಚಳಿಗಾಲದಲ್ಲಿ ಕೂದಲಿನ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಈ ಸುಲಭ ಟಿಪ್ಸ್ ಅನುಸರಿಸಿ!
ಕೊಬ್ಬರಿ ಎಣ್ಣೆ:
ನಿತ್ಯ ರಾತ್ರಿ ಮಲಗುವ ಮೊದಲು ಮುಖ ತೊಳೆದು, ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಮುಖಕ್ಕೆ ಅನ್ವಯಿಸಿ. ಇದು ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.