ಮಂಗಳೂರಿನಲ್ಲಿ ಇ-ಸಿಗರೇಟ್ ಅಕ್ರಮ ಮಾರಾಟ: ಮೂವರ ಬಂಧನ, ಲಕ್ಷಾಂತರ ಮೌಲ್ಯದ ವಸ್ತುಗಳು ಪೊಲೀಸರ ವಶಕ್ಕೆ

ಮಂಗಳೂರಿನ ಸಾಯಿಬೀನ್ ಎಂಬ ಕಾಂಪ್ಲೆಕ್ಸ್‌ವೊಂದರಲ್ಲಿ ಹಾಡುಹಗಲೇ ಇ-ಸಿಗರೇಟ್, ಹುಕ್ಕಾ ಸೇವನೆಗೆ ಬಳಸುವ ಸಾಧನಗಳ ಅಕ್ರಮ ಮಾರಾಟ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 

Written by - Yashaswini V | Last Updated : Oct 9, 2025, 08:37 AM IST
  • ಇ-ಸಿಗರೇಟ್ ಅಕ್ರಮ ಮಾರಾಟ
  • ಕಾಂಪ್ಲೆಕ್ಸ್‌ವೊಂದರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ದಂಧೆ
  • ಯುವಕ ಯುವತಿಯರೇ ಇವರ ಮುಖ್ಯ ಟಾರ್ಗೆಟ್
ಮಂಗಳೂರಿನಲ್ಲಿ ಇ-ಸಿಗರೇಟ್ ಅಕ್ರಮ ಮಾರಾಟ: ಮೂವರ ಬಂಧನ, ಲಕ್ಷಾಂತರ ಮೌಲ್ಯದ ವಸ್ತುಗಳು ಪೊಲೀಸರ ವಶಕ್ಕೆ

e cigarettes Illegal sale: ಮಂಗಳೂರು ನಗರದ ಲಾಲ್‌ಬಾಗ್‌ನಲ್ಲಿರುವ ಕಾಂಪ್ಲೆಕ್ಸ್‌ವೊಂದರ ಅಂಗಡಿಯಲ್ಲಿ ಇ-ಸಿಗರೇಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 9,72,745 ರೂ. ಮೌಲ್ಯದ ಇ-ಸಿಗರೇಟ್ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

Add Zee News as a Preferred Source

ಇ-ಸಿಗರೇಟ್ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಆರೋಪಿಗಳನ್ನು ಅಂಗಡಿಯ ಮಾಲಕ ಶಿವು ದೇಶಕೋಡಿ, ಸಂತೋಷ್, ಇಬ್ರಾಹಿಂ ಇರ್ಷಾದ್ ಎಂದು ಗುರುತಿಸಲಾಗಿದೆ. 

ಮಂಗಳೂರು ನಗರದ ಲಾಲ್ ಬಾಗ್ ನ ಸಾಯಿಬೀನ್ ಕಾಂಪ್ಲೆಕ್ಸ್ ನ ಆಮಂತ್ರಣ ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತವಾಗಿರುವ ಇ-ಸಿಗರೇಟ್ ಗಳನ್ನು, ಯಾವುದೇ ರಹದಾರಿಯನ್ನು ಪಡೆಯದೇ ಅಕ್ರಮವಾಗಿ ಸ್ವದೇಶಿ ಮತ್ತು ವಿದೇಶಿಯ ಸಿಗರೇಟ್ ಗಳನ್ನು ಹಾಗೂ ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ, ಯುವಕರ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಮೇರೆಗೆ ಸೋಮವಾರ (ಅ.6) ಸಂಜೆ ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿರವರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. 
  
ಆಮಂತ್ರಣ ಎಂಬ ಹೆಸರಿನ ಶಾಪ್ ಗೆ ದಾಳಿ ಮಾಡಿದಾಗ ಸದ್ರಿ ಶಾಪ್ ನಲ್ಲಿ ಒಟ್ಟು 847 (ಅಂದಾಜು ಮೌಲ್ಯ 4,43,125/-) ವಿವಿಧ ಕಂಪನಿಗಳ ಇ-ಸಿಗರೇಟ್ ಗಳನ್ನು, ಸಿಗರೇಟ್ ನ ಪ್ಯಾಕ್ ನ ಮೇಲೆ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿವಿಧ ಕಂಪನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 ಪ್ಯಾಕ್ (412 Box)  ಮತ್ತು 86 ಪ್ಯಾಕ್ ಸಿಗರೇಟ್ ಗಳು (ಅಂದಾಜು ಮೌಲ್ಯ 5,09120/-) ಮತ್ತು ಹುಕ್ಕಾ ಸೇವನೆ ಮಾಡುವ ಬಳಸುವ ವಿವಿಧ ಆಕೃತಿಗಳ 25 (ಅಂದಾಜು ಮೌಲ್ಯ ರೂ.20,500/-) ಸಾಧನಗಳನ್ನು ಒಟ್ಟು ಅಂದಾಜು ಮೌಲ್ಯ ರೂ.9,72,745/-  ಬೆಲೆಭಾಳುವ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಬರ್ಕೆ ಪೊಲೀಸ್ ಠಾಣೆಯಲ್ಲಿ ಮೊ.ನಂ:104/2025 ಕಲಂ: 7 & 8 Prohibition of Electronic Cigarettes (Production, Manufacture, Import, Export, Transport, Sale, Distribution, Storage and Advertisement) Act 2019  ಮತ್ತು ಕಲಂ: 20(2) COTPA, Cigarettes and Other Tobacco Products Act (Amendment) Bill 2015 ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News