)
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಮನ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲಿ ಹೊಸ ಲೋಕವೇ ತೆರೆದಿತ್ತು. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಅವರಿಗೆ ಮಠದ ಶ್ರೀಗಳು ಭವ್ಯ ಸ್ವಾಗತ ಕೋರಿದರು. ಬಳಿಕ ಮೋದಿ ಅವರು ಕೃಷ್ಣನ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿ ದೇವರ ದರ್ಶನ ಪಡೆದರು. ಇದೇ ವೇಳೆ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಇಷ್ಟಕ್ಕೂ ಲಕ್ಷ ಕಂಠ ಗೀತಾ ಪಾರಾಯಣ ಎಂದರೆ ಏನು?.
ಮಹಾಭಾರತದಲ್ಲಿ ಪಾಂಡವರು ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ನಡೆದಿರುತ್ತದೆ. 18 ದಿನಗಳು ನಡೆದ ಈ ಮಹಾಯುದ್ಧದಲ್ಲಿ ಅರ್ಜುನ್ಗೆ ಸಾರಥಿಯಾಗಿದ್ದ ಕೃಷ್ಣನೂ ಪ್ರತಿ ಹಂತದಲ್ಲೂ ವಿಜಯಕ್ಕಾಗಿ ಭಗವದ್ಗೀತೆಯನ್ನು ಬೋಧಿಸಿರುತ್ತಾರೆ. ಇದರಲ್ಲಿ ಮುಖ್ಯವಾಗಿ 15ನೇ ಅಧ್ಯಾಯನದ ಕುರಿತು ಹೇಳುತ್ತಾರೆ. ಕೃಷ್ಣ ಹೇಳಿದಂತೆ ಮಾಡುವ ಅರ್ಜನ್, ಪಾಂಡವರು ಕುರುಕ್ಷೇತ್ರದಲ್ಲಿ ಜಯಶಾಲಿಗಳು ಅಗುತ್ತಾರೆ. ಮೋಸದ ಜೂಜಿನಲ್ಲಿ ತಾವು ಕಳೆದುಕೊಂಡಿದ್ದನ್ನು ಯುದ್ಧದ ಮೂಲಕ ಮರಳಿ ಪಡೆಯುತ್ತಾರೆ.
ಭಗವದ್ಗೀತೆಯ 15ನೇ ಅಧ್ಯಾಯ ಏನು ಹೇಳುತ್ತದೆ?
ಭಗವದ್ಗೀತೆಯ 15ನೇ ಅಧ್ಯಾಯದಲ್ಲಿ ವಿಶ್ವವನ್ನು ಆಲದ ಮರಕ್ಕೆ ಹೋಲಿಕೆ ಮಾಡಲಾಗುತ್ತದೆ. ಈ ಅಧ್ಯಾಯವನ್ನು ಪುರಷೋತ್ತಮಯೋಗ ಎಂದು ಕೂಡ ಕರೆಯುತ್ತಾರೆ. ಆಲದ ಮರಕ್ಕೆ ಏಕೆ ಹೋಲಿಕೆ ಮಾಡುತ್ತಾರೆ ಎಂದರೆ ಇದರ ಬೇರುಗಳು ಮೇಲ್ಮುಖವಾಗಿ, ಕವಲುಗಳು ಕೆಳಮುಖವಾಗಿಯು ಬೆಳೆದಿರುತ್ತವೆ. ವಿಶ್ವದ ಭ್ರಮಾತ್ಮಕ ಸ್ವರೂಪ ಮತ್ತು ಶಾಶ್ವತವಾದ ಪರಮಾತ್ಮನ ಬಗ್ಗೆ ವಿವರಿಸುತ್ತದೆ. ಅದರಂತೆ ಭಗವಂತನು ಆಲದಮರದಂತೆ ಹೇಳುತ್ತದೆ.
ಅಧ್ಯಾಯ, ಪ್ರಪಂಚ ಮತ್ತು ಪರಮಾತ್ಮನ ನಡುವಿನ ಸಂಬಂಧದ ಬಗ್ಗೆ ಹೇಳುತ್ತದೆ. ಭೂಮಿ ಮೇಲಿನ ಎಲ್ಲ ಜೀವಿಗಳು ಭಗವಂತನಿಗೆ ಸೇರಿದವು. ಭಗವಂತನು ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿ ಜ್ಞಾನ, ಸ್ಮರಣೆ, ಮರೆವನ್ನು ನೀಡುತ್ತಾನೆ. ಈ ಅಧ್ಯಾಯದಲ್ಲಿ ಪುರುಷೋತ್ತಮನ ತತ್ವದ ಬಗ್ಗೆ ವಿವರವಾಗಿ ಹೇಳುತ್ತದೆ. ಈ ವಿಶ್ವದಲ್ಲಿ ನಾಶವಾಗುವ ಮತ್ತು ನಾಶವಾಗದ ಈ ಎರಡನ್ನು ಮೀರಿದ ಶ್ರೇಷ್ಠ ಪುರುಷ ಭಗವಂತ. ಈ ಸತ್ಯವನ್ನು ಅರಿತವರು ಪುರುಷೋತ್ತಮನಾಗುತ್ತಾರೆ.
ಶ್ರೀಕೃಷ್ಣನೂ ಅರ್ಜುನ್ಗೆ ಬೋಧಿಸಿದ ಭಗವದ್ಗೀತೆಯ 15ನೇ ಅಧ್ಯಾಯವನ್ನು ಇಂದು ಉಡುಪಿಯ ಶ್ರೀ ಕೃಷ್ಣ ಸನ್ನಿಧಾನದಲ್ಲಿ ಪಠನ ಮಾಡಲಾಗಿದೆ. ಈ ಮಹಾ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು, ನಾಗರಿಕರು ಸೇರಿದಂತೆ ಒಂದು ಲಕ್ಷ ಮಂದಿ ಭಾಗಿಯಾಗಿದ್ದರು. ಎಲ್ಲರು ಏಕಕಾಲದಲ್ಲಿ ಶ್ರೀಕೃಷ್ಣ, ಅರ್ಜುನ್ಗೆ ಬೋಧಿಸಿದ 15ನೇ ಅಧ್ಯಾಯವನ್ನು ಪಠನೆ ಮಾಡಿದರು. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪುತ್ತಿಗೆ ಮಠದ ಶ್ರೀಸುಗಣೇಂದ್ರ ತೀರ್ಥರು, ಸುಶಿರೀಂದ್ರ ತೀರ್ಥ ಸ್ವಾಮೀಜಿಗಳ ಸನ್ನಿಧಿಯಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಲಕ್ಷಾಂತರ ಜನರು ಏಕಕಾಲದಲ್ಲಿ ಪಾರಾಯಣ ಮಾಡಿದರು.