)
ದಕ್ಷಿಣ ಕನ್ನಡ: ಧರ್ಮಸ್ಥಳದ ಸುತ್ತಮುತ್ತ ಕಾನೂನುಬಾಹಿರವಾಗಿ ಅನೇಕ ಮೃತದೇಹಗಳನ್ನು ಹೂತ ಆರೋಪದ ಕುರಿತು ಎಸ್ ಐಟಿ ನಡೆಸ್ತಿರೋ ತನಿಖೆ ಚುರುಕುಗೊಂಡಿದೆ. ಇಂದು ಶೋಧದ ವೇಳೆ ಟ್ವಿಸ್ಟ್ ನಡೆದ ಮಧ್ಯೆ ಗುಂಪೊಂದು ಅನೈತಿಕ ಪೊಲೀಸ್ ಗಿರಿ ನಡೆಸಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದೆ.
ಧರ್ಮಸ್ಥಳದ ಸುತ್ತಮುತ್ತ ಅನೇಕ ಮೃತದೇಹಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದ ಕುರಿತು ಎಸ್ ಐಟಿ ತನಿಖೆ ನಡೆಸ್ತಿದ್ದು ಚುರುಕು ಪಡೆದುಕೊಂಡಿದೆ. ಇಂದು ದೂರುದಾರ ಗುರುತು ಮಾಡಿದ್ದ ಪಾಯಿಂಟ್ ನಂಬರ್ 13 ಬಿಟ್ಟು ಮತ್ತೆ ಪಾಯಿಂಟ್ 11 ರ ಸಮೀಪ ಇದ್ದ ಬಂಗ್ಲೆಗುಡ್ಡ ಕಾಡಿಗೆ ಎಸ್ ಐಟಿ ತಂಡ ತೆರಳಿ ಅಲ್ಲಿ ಮತ್ತೆ ಶೋಧ ಕಾರ್ಯ ನಡೆಸಿತು.
ಈ ಮಧ್ಯೆ ಧರ್ಮಸ್ಥಳದಲ್ಲಿ ನಾಲ್ಕು ಮಂದಿ ಯೂಟ್ಯೂಬರ್ ಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದಾರೆ. ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಇನ್ನೋರ್ವ ಹಲ್ಲೆಗೆ ಒಳಗಾದ ಯ್ಯೂಟ್ಯೂಬರ್ ಗಳು.
ಹಲ್ಲೆ ನಡೆದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಯೂಟ್ಯೂಬರ್ ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಬಂದ SIT ಯ ಒಂದು ತಂಡ ಹಲವಾರು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
1995 ರಿಂದ 2014 ರವರೆಗೆ ಕರ್ತವ್ಯ ಮಾಡಿದ ಪಿಡಿಒ ಗಳು, ಇತರ ಅಧಿಕಾರಿಗಳ ವಿ.ಎ ಗಳ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಎಸ್.ಐ.ಟಿ ಇನ್ಸ್ಪೆಕ್ಟರ್ ಸಂಪತ್ ಆಗಸ್ಟ್ 6 ರಂದು ಬೆಳಗ್ಗೆ ಗ್ರಾಮ ಪಂಚಾಯತಿಗೆ ಆಗಮಿಸಿ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಗಂಭೀರ ಪ್ರಕರಣದ ಕುರಿತು ಎಸ್ ಐಟಿ ನಡೆಸ್ತಿರೋ ತನಿಖೆ ಮಹತ್ವದ ಹಾದಿಗೆ ಬಂದಿದೆ. ಮುಂದೇನಾಗುತ್ತೆ ಎನ್ನುವುದೇ ಕುತೂಹಲ ಮೂಡಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.