ಶನಿವಾರ ಬೆಳ್ತಂಗಡಿ ಕೋರ್ಟ್ಗೆ ಚೆನ್ನಯ್ಯನನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು SIT ಅಧಿಕಾರಿಗಳು ಮನವಿ ಮಾಡಿದ್ದರು. ಈ ಮನವಿಯನ್ನ ಪುರಸ್ಕರಿಸಿದ ಬೆಳ್ತಂಗಡಿ ಕೋರ್ಟ್ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ.

MASK MAN ARRESTED
: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಸಿ.ಎಸ್.ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸಲಾಗಿದೆ. ಬಂಧನದ ನಂತರ ಆತನನ್ನ SIT ಪೊಲೀಸರು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯವು 10 ದಿನಗಳ ಕಾಲ ಎಸ್ಐಟಿ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದೆ.
ಪ್ರಕರಣ ಸಂಬಂಧ ಮುಂದಿನ 10 ದಿನಗಳ ಕಾಲ ಚಿನ್ನಯ್ಯನನ್ನು SIT ಪೊಲೀಸರು ತೀವ್ರ ವಿಚಾರಣೆ ನಡೆಸಲಿದ್ದಾರೆ. ಹತ್ತು ದಿನಗಳ ಕಾಲ ಈ ಸುಳ್ಳು ದೂರಿನ ಹಿಂದಿನ ಗ್ಯಾಂಗ್ ಯಾವುದು? ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಏನೆಲ್ಲಾ ಆಮಿಷವೊಡ್ಡಲಾಗಿತ್ತು ಅನ್ನೋದರ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಶನಿವಾರ ಬೆಳ್ತಂಗಡಿ ಕೋರ್ಟ್ಗೆ ಚೆನ್ನಯ್ಯನನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು SIT ಅಧಿಕಾರಿಗಳು ಮನವಿ ಮಾಡಿದ್ದರು. ಈ ಮನವಿಯನ್ನ ಪುರಸ್ಕರಿಸಿದ ಬೆಳ್ತಂಗಡಿ ಕೋರ್ಟ್ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ತಾನು ಮೊದಲು ತಂದಿದ್ದ ತಲೆ ಬುರುಡೆಯನ್ನ ಎಲ್ಲಿಂದ ತಂದೆ ಎಂಬುದನ್ನು SIT ಅಧಿಕಾರಿಗಳಿಗೆ ತಿಳಿಸಲು ವಿಫಲನಾಗಿದ್ದಾನೆ. ತಲೆ ಬುರುಡೆಯ ಮೂಲವನ್ನು ಬಹಿರಂಗಪಡಿಸದೇ ಇರುವ ಕಾರಣ ಆತನನ್ನ ಬಂಧಿಸಲಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ 2 ಲಕ್ಷ ರೂಪಾಯಿ ಹಣವನ್ನು ಗ್ಯಾಂಗ್ ಒಂದು ನೀಡಿ ಸುಳ್ಳು ದೂರು ನೀಡಲು ಟ್ರೇನಿಂಗ್ ನೀಡಿದ್ದಾರಂತೆ. ಆ ಟ್ರೇನಿಂಗ್ ಪಡೆದ ಬಳಿಕ ಪೊಲೀಸರಿಗೆ ಚಿನ್ನಯ್ಯ ಸುಳ್ಳು ದೂರು ಕೊಟ್ಟಿದ್ದ. ಗ್ಯಾಂಗ್ ಒಂದು ತಲೆ ಬುರುಡೆಯನ್ನು ಚಿನ್ನಯ್ಯನ ಕೈಗೆ ಕೊಟ್ಟು ಅದನ್ನು ಪೊಲೀಸರು, ಕೋರ್ಟ್ಗೆ ಒಪ್ಪಿಸು ಎಂದು ಹೇಳಿದ್ದಾರಂತೆ.
ಆ ಗ್ಯಾಂಗ್ ಹೇಳಿದಂತೆ ಚಿನ್ನಯ್ಯ ಕೇಳಿದ್ದಾನೆ. ಈಗ SIT ಅಧಿಕಾರಿಗಳು ಚಿನ್ನಯ್ಯಗೆ ಸುಳ್ಳು ದೂರು ನೀಡಲು ತರಬೇತಿ ಕೊಟ್ಟ ಗ್ಯಾಂಗ್ ಬಗ್ಗೆಯೇ ಗಮನ ಕೇಂದ್ರೀಕರಿಸಿ ತನಿಖೆ ನಡೆಸಲಿದ್ದಾರೆ. ಚಿನ್ನಯ್ಯನನ್ನು ಈ ಬಗ್ಗೆಯೇ ತೀವ್ರ ವಿಚಾರಣೆ ನಡೆಸಲಿದ್ದಾರೆ. ಇದರ ಜೊತೆಗೆ ಮೊದಲ ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದ ಅನ್ನೋದರ ಬಗ್ಗೆಯೂ ವಿಚಾರಣೆ ನೆಡಸಲಿದ್ದಾರೆಂದು ತಿಳಿದುಬಂದಿದೆ.