ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿನ ಹುಡುಕಾಟದ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ....

ದಕ್ಷಿಣ ಕನ್ನಡ : ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿನ ಹುಡುಕಾಟ ಶೋಧ ಕಾರ್ಯದಲ್ಲಿ ಹೊಸ ಬೆಳವಣಿಗೆ ಒಂದು ಕಂಡಿದೆ. ಇಂದು ಹೊಸ ಸ್ಥಳಕ್ಕೆ ತಂಡವನ್ನು ಸಾಕ್ಷಿ ದೂರುದಾರ ಕರೆದೊಯ್ದಿದ್ದನು.
11ನೇ ಸ್ಫಾಟ್ ನಲ್ಲಿ ಕಳೇಬರವೊಂದರ ಅವಶೇಷಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೆ ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿಲ್ಲ. ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ ಹೊಸ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಅರಣ್ಯದ ಒಳಗೆ 11.30ಕ್ಕೆ ಎಸ್ ಐಟಿ ತಂಡ ತೆರಳಿತ್ತು. ಅರಣ್ಯದ ಒಳಭಾಗಕ್ಕೆ ನಾಲ್ವರು ಸಶಸ್ತ್ರ ತಂಡದ ಸದಸ್ಯರು ಹೋಗಿದ್ದಾರೆ. ಎರಡು ಮೂಟೆ ಉಪ್ಪನ್ನು ಕಾರ್ಮಿಕರು ತೆಗೆದುಕೊಂಡು ಹೋಗಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.