)
ದಕ್ಷಿಣ ಕನ್ನಡ : ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನ ಸುತ್ತ ಸತ್ತ ಮೃತದೇಹಗಳು ಮಾತನಾಡತೊಡಗಿದೆ. ಅಲ್ಲಲ್ಲಿ ಬುರುಡೆ, ಮಾನವನ ಅವಶೇಷಗಳು ಪತ್ತೆಯಾಗಿದೆ. ಇಂದು ಕೂಡಾ ಎಸ್ ಐಟಿ ತನಿಖೆ ಮುಂದುವರಿದಿದ್ದು ಎಸ್ ಐ ಟಿ ಶೋಧದ ವೇಳೆ ಮತ್ತೆ ಎರಡು ತಲೆ ಬುರುಡೆಗಳು ಪತ್ತೆಯಾಗಿದೆ.
ಬಂಗ್ಲೆ ಗುಡ್ಡದಲ್ಲಿ ಬುಧವಾರವೂ ಹಲವು ತಲೆ ಬುರುಡೆಗಳು ಪತ್ತೆಯಾಗಿದ್ದವು. ಬುಧವಾರ ಗುರುತಿಸಿದ ಜಾಗದಲ್ಲಿ ಇಂದು ಪರಿಶೀಲನೆ ನಡೆಸಲಾಗಿದ್ದು ಅಲ್ಲಿ ಇನ್ನೆರಡು ಬುರುಡೆಗಳು ಹಾಗೂ ಅವಶೇಷಗಳು ಪತ್ತೆಯಾಗಿದ್ದು ಇಂದು ಅದನ್ನು ಸಂಗ್ರಹಿಸುವ ಕಾರ್ಯ ಮಾಡಿದ್ರು. ಗುಡ್ಡದಮೇಲೆ ಚದುರಿಕೊಂಡ ರೀತಿಯಲ್ಲಿ ಎಲಿಬುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಲಭಿಸಿದ ಎಲ್ಲ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಮಾಡಿದೆ. ಇದೀಗ ಒಟ್ಟು ಗುರುತಿಸಿದ ಸ್ಥಳಗಳಿಂದ 7ತಲೆಬುರುಡೆಗಳು ಪತ್ತೆಯಾಗಿದ್ದು ಸಾಕಷ್ಟು ಎಲುಬಿನ ಭಾಗಗಳು ಲಭಿಸಿದೆ.
ಇದನ್ನೂ ಓದಿ:ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲು
ಧರ್ಮಸ್ಥಳದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಏಳು ಅಸ್ಥಿಪಂಜರ ಪತ್ತೆಯಾದ ಪ್ರಕರಣದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಐಡಿ ಕಾರ್ಡ್ ಮೂಲಕ ಎಸ್.ಐ.ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಟೊ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ ಎಂಬವರ ಅಸ್ಥಿಪಂಜರ ಎಂದು ಎಸ್.ಐ.ಟಿ ದೃಢಪಡಿಸಿದೆ.
ಅಸ್ಥಿಪಂಜರದ ಜೊತೆ ಇದ್ದ ಐಡಿ ಕಾರ್ಡ್ ಪತ್ತೆ ಹಚ್ಚಲಾಗಿದೆ.ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋದ ಅಯ್ಯಪ್ಪ ನಾಪತ್ತೆಯಾದ ಬಗ್ಗೆ ಕಟ್ಟು ಪೊಲೀಸ್ ಠಾಣೆಯಲ್ಲಿ ಕುಟುಂಬ ಸದಸ್ಯರು ಪ್ರಕರಣ ದಾಖಲಿಸಿದ್ದರು ಆದರೆ ಅವರ ಬಗ್ಗೆ ಯಾವುದೇ ಸುಳಿವುಗಳು ಲಭಿಸಿರಲಿಲ್ಲ. ಇದೀಗ ಬರೆ ತಲೆ ಬುರುಡೆ ಹಾಗು ಎಲುಬುಗಳು ಮಾತ್ರ ಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಇದು ಅವರದ್ದೇ ಮೃತದೇಹವೇ ಎಂದು ವಿಧಿವಿಜ್ಞಾನ ಪ್ರಯೊಗಾಲಯದಿಂದಲೇ ಪತ್ತೆಯಾಗಬೇಕಾಗಿದೆ.
ಇದನ್ನೂ ಓದಿ:ಒಂಭತ್ತು ಸ್ಥಳಗಳಲ್ಲಿ ಮಾನವ ಅವಶೇಷಗಳು ಪತ್ತೆ
ಅತ್ತ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿ ಸೆಪ್ಟೆಂಬರ್ 6 ರಿಂದ ನ್ಯಾಯಾಂಗ ಬಂಧನಲ್ಲಿದ್ದಾರೆ. ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಯ್ತು. ಚಿನ್ನಯ್ಯನ ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟ್ ನಲ್ಲಿ ಇಂದು ಮತ್ತೆ ದಾಖಲಿಸಲಯ್ತು. ಬೆಳ್ತಂಗಡಿ ನ್ಯಾಯಾಲಯದ ಆದೇಶದಂತೆ ಸೆ.18 ರಂದು ಶಿವಮೊಗ್ಗ ಜೈಲಿನಿಂದ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಮಧ್ಯಾಹ್ನ ಕರೆದುಕೊಂಡು ಬಂದಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು.
ಈಗಾಗಲೆ ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ನ್ಯಾಯಾಧೀಶರ ಮುಂದೆ ಎರಡು ಹೇಳಿಕೆಗಳನ್ನು ದಾಖಲಿಸಿದ್ದು ಆತ ಇಂದು ಮತ್ತೊಂದು ಹೇಳಿಕೆಯನ್ನು ದಾಖಲಿಸಲಿರುವುದಾಗಿ ತಿಳಿದು ಬಂದಿದೆ. ದಿನದಿಂದ ದಿನಕ್ಕೆ ಎಸ್ ಐಟಿ ಶೋಧದಲ್ಲಿ ಭಯಾನಕ ಸಂಗತಿಗಳು ಹೊರಬರ್ತಿದೆ. ಮುಂದೆ ಈ ತನಿಖೆಯ ಹಾದಿ ಏನಾಗುತ್ತೋ ಕುತೂಹಲ ಮೂಡಿಸಿದೆ.